ಇಸ್ರೇಲ್‌ನಲ್ಲಿ ಉದ್ವಿಗ್ನ ವಾತಾವರಣ! ಸೇನಾ ಸಜ್ಜುಗೊಳಿಸುವಿಕೆಗೆ ಪ್ರಧಾನಿ ಆದೇಶ!

masthmagaa.com:

ಇಸ್ರೇಲ್‌ನಲ್ಲಿ ವಾತಾವರಣ ಮತ್ತೆ ಉದ್ವಿಗ್ನಗೊಂಡಿದೆ. ಇಸ್ರೇಲ್‌ ಹಾಗೂ ಪ್ಯಾಲಸ್ತೈನ್‌ ಕೆಲ ದಿನಗಳಿಂದ ದಾಳಿ ಹಾಗೂ ಪ್ರತಿದಾಳಿಯನ್ನ ಹೆಚ್ಚಿಗೆ ಮಾಡಿವೆ. ಇದೀಗ ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ ಹಾಗೂ ವೆಸ್ಟ್‌ಬ್ಯಾಂಕ್‌ನಲ್ಲಿ ಪ್ರತ್ಯೇಕ ದಾಳಿಗಳಾಗಿವೆ. ವೆಸ್ಟ್‌ಬ್ಯಾಂಕ್‌ ದಾಳಿಯಲ್ಲಿ 16 ಹಾಗೂ 20 ವರ್ಷದ ಸಹೋದರಿಯರು ಮೃತಪಟ್ಟಿದ್ರೆ, ಟೆಲ್‌ ಅವೀವ್‌ ದಾಳಿಯಲ್ಲಿ ಇಟಾಲಿಯನ್‌ ಪ್ರವಾಸಿಗರೊಬ್ಬರು ಮೃತಪಟ್ಟು, 17 ಜನ ಗಾಯಗೊಂಡಿದ್ದಾರೆ. ಇನ್ನು ಈ ದಾಳಿಗಳ ಬೆನ್ನಲ್ಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಪೊಲೀಸ್‌ ಹಾಗೂ ಸೇನಾಪಡೆಗಳನ್ನ ಸಜ್ಜುಗೊಳಿಸೋಕೆ ಆದೇಶ ನೀಡಿದ್ದಾರೆ. ಅಂದ್ಹಾಗೆ ಜೆರುಸಲೆಂನ ಅಲ್‌ ಅಕ್ಸಾ ಮಸೀದಿಯಲ್ಲಿ ಪ್ಯಾಲೆಸ್ತೈನ್‌ರ ಮೇಲೆ ಇಸ್ರೇಲ್‌ ಪೊಲೀಸರು ದಾಳಿ ಮಾಡಿದ ನಂತರ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಪೊಲೀಸರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೈನ್‌ ಲೆಬನಾನ್‌ನಿಂದ ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ಮಾಡಿತ್ತು. ರಾಕೆಟ್ ದಾಳಿಗೆ‌ ಪ್ಯಾಲಸ್ತೈನ್‌ನ ಹಮಾಸ್‌ ಗುಂಪು ಕಾರಣ ಅಂತ ಆರೋಪಸಿ ಹಮಾಸ್‌ ಗುಂಪುನ್ನ ಟಾರ್ಗೆಟ್‌ ಮಾಡಿ ಇಸ್ರೇಲ್‌ ಗಾಜಾ ಪಟ್ಟಿ ಮೇಲೆ ದಾಳಿ ಮಾಡಿತ್ತು. ಇದೀಗ ಅದಕ್ಕೆ ಪ್ರತಿಯಾಗಿ ಮತ್ತೆ ಪ್ಯಾಲಸ್ತೈನ್‌ ಇಸ್ರೇಲ್‌ ಮೇಲೆ ದಾಳಿ ಮಾಡಿದೆ. ಈ ದಾಳಿಗೂ ಹಮಾಸ್‌ ಗುಂಪು ಕಾರಣ ಅಂತ ಇಸ್ರೇಲ್‌ ಆರೋಪಿಸಿದೆ. ಹೀಗೆ ಒಬ್ಬರ ಮೇಲೆ ಇನ್ನೊಬ್ಬರು ಆರೋಪಿಸಿ, ದಾಳಿಗೆ ಪ್ರತಿದಾಳಿಯನ್ನ ಮಾಡ್ತಿರೋದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟಾನಿಯೋ ಗುಟೆರೆಸ್‌, ಇಸ್ರೇಲ್‌ ಹಾಗೂ ಪ್ಯಾಲಸ್ತೈನ್‌ಗೆ ತಾಳ್ಮೆಯಿಂದ ವರ್ತಿಸೋಕೆ ಕರೆ ನೀಡಿದ್ದಾರೆ. ಇನ್ನೊಂದ್‌ ಕಡೆ ಅಮೆರಿಕ ಇಸ್ರೇಲ್‌ ಪರವಾಗಿ ಧ್ವನಿ ಎತ್ತಿದ್ದು, ಯಾವುದೇ ರಾಷ್ಟ್ರದ ಇನ್ನೊಸೆಂಟ್‌ ನಾಗರಿಕರನ್ನ ಟಾರ್ಗೆಟ್‌ ಮಾಡಿ ದಾಳಿ ಮಾಡೋದು ಸರಿಯಲ್ಲ ಅಂತ ಹೇಳಿದೆ. ಇತ್ತ ಫ್ರಾನ್ಸ್‌ ಕೂಡ ಇಸ್ರೇಲ್‌ಗೆ ಬೆಂಬಲ ತೋರಿಸಿದೆ. ಕಳೆದ 13 ತಿಂಗಳಿನಿಂದ ಯುಕ್ರೇನ್‌ ಮೇಲೆ ದಾಳಿ ನಡೆಸಿರೊ ರಷ್ಯಾ ಇಸ್ರೇಲ್‌ ಹಾಗೂ ಪ್ಯಾಲಸ್ತೈನ್‌ಗೆ ಕದನ ವಿರಾಮ ಘೋಷಿಸುವಂತೆ ಕರೆ ನೀಡಿದೆ.

-masthmagaa.com

Contact Us for Advertisement

Leave a Reply