ಇಸ್ರೇಲ್‌ಗೆ ಇರಾನ್‌ನಿಂದ ಸಂಕಷ್ಟ! ಯುದ್ಧಕ್ಕೆ ನಡೀತಿದೆ ತಯಾರಿ!

masthmagaa.com:

ಇಸ್ರೇಲ್‌-ಹಮಾಸ್‌, ರಷ್ಯಾ-ಯುಕ್ರೇನ್‌ ಬಳಿಕ ಈಗ ಜಗತ್ತಿನಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ ದಟ್ಟವಾಗ್ತಿದೆ. ಸದ್ಯ ಹಮಾಸ್‌ ಜೊತೆ ಕಾದಾಡ್ತಿರೋ ಇಸ್ರೇಲ್‌ ಈಗ ಮತ್ತೊಂದು ಆಪಾಯವನ್ನ ತನ್ನ ಕೊರಳಿಗೆ ಸುತ್ಕೊಂಡಿದೆ. ಸಿರಿಯಾದಲ್ಲಿರೋ ಇರಾನ್‌ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿ ಹೊಸ ಗಂಡಾಂತರವನ್ನ ಬರಮಾಡ್ಕೊಂಡಿದೆ. ರಾಯಭಾರ ಕಚೇರಿ ಮೇಲಿನ ದಾಳಿಗೆ ಇರಾನ್‌ ಪ್ರತೀಕಾರ ತೀರಿಸಿಕೊಳ್ಳೋದಾಗಿ ಬುಸುಗುಟ್ತಾ ಇದೆ. ಇದೀಗ ಇರಾನ್‌ ಅಮೆರಿಕಕ್ಕೆ, ನಮ್ಮಿಬ್ಬರ ಯುದ್ಧದ ಮಧ್ಯೆ ಬರ್ಬೇಡಿ. ದೂರ ಇರಿ ಅಂತ ವಾರ್ನ್‌ ಮಾಡಿದೆ. ಅಮೆರಿಕಕ್ಕೆ ಪತ್ರ ಬರೆದಿರೋ ಇರಾನ್‌, ನೇತನ್ಯಾಹುವಿನ ಬಲೆಯಲ್ಲಿ ಸಿಗಾಕೋಬೇಡಿ. ದೂರ ಇದ್ರೆ ನಿಮಗೆ ಒಳ್ಳೇದು, ಹಾನಿಯಾಗಲ್ಲ ಅಂತ ವಾರ್ನ್‌ ಮಾಡಿದೆ. ಈ ವಿಚಾರವನ್ನ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿಯ ಡೆಪ್ಯುಟಿ ಚೀಫ್‌ ಆಫ್‌ ಸ್ಟಾಫ್‌ ತಿಳಿಸಿದ್ದಾರೆ. ಅಲ್ಲದೇ ಇದಕ್ಕೆ ಪ್ರತಿಯಾಗಿ ಅಮೆರಿಕ, ತಮ್ಮ ಜಾಗಗಳ ಮೇಲೆ ದಾಳಿ ಮಾಡ್ಬೇಡಿ ಅಂತ ಕೇಳ್ಕೊಂಡಿದೆ ಅಂದಿದ್ದಾರೆ…. ಇದಕ್ಕೆ ರಿಯಾಕ್ಟ್‌ ಮಾಡಿರೋ ಅಮೆರಿಕ, ಹೌದು ಇರಾನ್‌ ಮೆಸೇಜ್‌ ಕಳಿಸಿದೆ. ಇದನ್ನೇ ನೆಪವಾಗಿಟ್ಕೊಂಡು ಅಮೆರಿಕನ್ನರು ಮತ್ತು ಅಮೆರಿಕದ ಜಾಗದ ಮೇಲೆ ದಾಳಿ ಮಾಡ್ಬೇಡಿ ಅಂತ ಹೇಳಿದ್ವಿ. ಆದ್ರೆ ನಾವು ದಾಳಿ ಮಾಡ್ಬೇಡಿ ಅಂತ ʻಕೇಳ್ಕೊಂಡಿಲ್ಲʼ, ನಮ್ಮ ಸುದ್ದಿಗೆ ಬರ್ಬೇಡಿ ಅಂತ ʻಹೇಳಿದ್ದೀವಿʼ ಅಂದಿದೆ.

ಇತ್ತ ಯುದ್ಧ ಸನ್ನಿಹಿತವಾಗ್ಗಿರೋದ್ರಿಂದ ಇಸ್ರೇಲ್‌ ತಯಾರಾಗೋಕೆ ಶುರು ಮಾಡಿದೆ…. ಇಸ್ರೇಲ್‌ ತನ್ನ0 ಜಿಪಿಎಸ್‌ ನ್ಯಾವಿಗೇಷನ್‌ ಸರ್ವೀಸ್‌ನ್ನ ಬ್ಲಾಕ್‌ ಮಾಡಿದೆ. ಈ ಮೂಲಕ ಜಿಪಿಎಸ್‌ ಆಧಾರದ ಮೇಲೆ ದಾಳಿ ಮಾಡಲು ಬರೋ ಕ್ಷಿಪಣಿ ಮತ್ತು ಡ್ರೋನ್‌ಗಳ ಪ್ರಯತ್ನ ವಿಫಲಗೊಳಿಸೋ ಪ್ಲಾನ್‌ ಮಾಡಲಾಗಿದೆ. ಅಷ್ಟೇ ಅಲ್ದೇ ತನ್ನ ಸೇನೆಯಲ್ಲಿ ಕೆಲಸ ಮಾಡೋರ ರಜೆಯನ್ನ ತಾತ್ಕಾಲಿಕವಾಗಿ ಕ್ಯಾನ್ಸಲ್‌ ಕೂಡ ಮಾಡಿದೆ. ಇನ್ನು ತನ್ನ ಏರ್‌ ಡಿಫೆನ್ಸ್‌ ಕಮಾಂಡ್‌ ಹೆಚ್ಚು ಮಾಡಿದೆ. ಇಸ್ರೇಲ್‌ ಗಡಿಯುದ್ದಕ್ಕೂ ಸೇನಾ ಪಡೆಗಳನ್ನ ನಿಯೋಜಿಸಲಾಗಿದೆ. ಇಸ್ರೇಲ್‌ ಜನರಿಗೆ ಅಲರ್ಟ್‌ ನೀಡಲಾಗಿದ್ದು, ಅಗತ್ಯ ವಸ್ತುಗಳಿಗೆ ಪದೇ ಪದೇ ಅಂಗಡಿಗೆ ತೆರಳದೇ…ಒಂದೇ ಸಮನೆ ಸ್ಟೋರ್‌ ಮಾಡಿಟ್ಟುಕೊಳ್ಳಲು ಸೂಚಿಸಿದೆ. ಇದರ ಜೊತೆಗೆ ಪ್ರಮುಖವಾಗಿ ಬೇರೆ ಬೇರೆ ದೇಶಗಳಲ್ಲಿರೋ ತನ್ನ ರಾಯಭಾರಿಗಳನ್ನ ಸೇಫ್‌ ಜಾಗಕ್ಕೆ ಸ್ಥಳಾಂತರಿಸ್ತಿದೆ. ಅಂದ್ಹಾಗೆ ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ….ಇರಾನ್‌ ದಾಳಿಯ ಸಾಧ್ಯತೆ ಬಗ್ಗೆ ಇಸ್ರೇಲ್‌ಗೆ ಎಚ್ಚರಿಕೆ ನೀಡಿರೋ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಈ ಎಲ್ಲಾ ಬೆಳವಣಿಗೆಗಳು ಆಗ್ತಿರೋದು ರಿಪೋರ್ಟ್‌ ಆಗಿದೆ. ಇನ್ನು ಕೇವಲ ಇಸ್ರೇಲ್‌ ಮಾತ್ರವಲ್ಲ….ಅದ್ರ ಗೆಳೆಯ ಅಮೆರಿಕ ಕೂಡ ಇರಾನ್‌ ದಾಳಿಗೆ ಹೈ ಅಲರ್ಟ್‌ ಆಗಿದೆ. ಮುಂದಿನ ವಾರದೊಳಗೆ ಇರಾನ್‌ ದಾಳಿ ನಡೆಸೋ ಸಾಧ್ಯತೆಯಿದೆ ಅಂತ ಅಮೆರಿಕ ಕೂಡ ತಯಾರಿಗಳನ್ನ ನಡೆಸ್ತಿದೆ. ಅಮೆರಿಕದಲ್ಲಿರೋ ಇಸ್ರೇಲ್‌ಗೆ ಸಂಬಂಧಿಸಿದ ಆಸ್ತಿ ಅಥ್ವಾ ಅಮೆರಿಕದ ಆಸ್ತಿ ಮೇಲೆನೇ ಇರಾನ್‌ ಟಾರ್ಗೆಟ್‌ ಮಾಡೋ ಸಾಧ್ಯತೆ ಇದೆ ಅಂತ ಅಮೆರಿಕದ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬೈಡನ್‌ ಮತ್ತು ನೆತನ್ಯಾಹು ನಿರಂತರ ಕಾಂಟಾಕ್ಟ್‌ನಲ್ಲಿದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply