ಹತ್ಯಾಕಾಂಡ ಆರೋಪ ಅಲ್ಲಗೆಳೆದ ಇಸ್ರೇಲ್‌! ಶಿಕ್ಷಿಸಲು ಟರ್ಕಿ ಪಟ್ಟು!

masthmagaa.com:

ಇಸ್ರೇಲ್‌ ಹಮಾಸ್‌ ವಿರುದ್ಧ ಯುದ್ಧಕ್ಕಿಳಿದು ಪ್ಯಾಲೆಸ್ತೀನರ ಹತ್ಯಾಕಾಂಡ ನಡೆಸ್ತಿದೆ ಅನ್ನೋ ದಕ್ಷಿಣ ಆಫ್ರಿಕಾ ಆರೋಪವನ್ನ ಇಸ್ರೇಲ್‌ ರಿಜೆಕ್ಟ್‌ ಮಾಡಿದೆ. ಅಂತಾರಾಷ್ಟ್ರೀಯ ನ್ಯಾಯಲಯದ ವಿಚಾರಣೆ ವೇಳೆ ಹೇಳಿಕೆ ನೀಡಿರೋ ಇಸ್ರೇಲ್‌, ʻಪ್ಯಾಲೆಸ್ತೀನಿಯರ ಹತ್ಯಾಕಾಂಡ ನಡೆಸ್ತಿರೋದು ಹಮಾಸ್‌. ನಾವು ಕೇವಲ ಹಮಾಸ್‌ ವಿರುದ್ಧ ಯುದ್ಧ ಮಾಡ್ತಿರೋದು, ಪ್ಯಾಲಸ್ತೇನಿ ಜನರ ವಿರುದ್ಧ ಅಲ್ಲʼ. ಅಂತ ಹೇಳಿದೆ. ನಂತರ ಈ ಬಗ್ಗೆ ರಿಯಾಕ್ಟ್‌ ಮಾಡಿದ ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಆನ್‌, ʻಇಸ್ರೇಲ್‌ ವಿರುದ್ಧ ಡಾಕ್ಯುಮೆಂಟ್ಸ್‌ ಕೊಟ್ಟು ಎವಿಡೆನ್ಸ್‌ ನೀಡೋ ಕೆಲಸವನ್ನ ಟರ್ಕಿ ಕಂಟಿನ್ಯೂ ಮಾಡುತ್ತೆ. ಇದ್ರಿಂದ ಇಸ್ರೇಲ್‌ಗೆ ಖಂಡಿತವಾಗ್ಲೂ ಶಿಕ್ಷೆಯಾಗಲಿದೆ ಅನ್ನೋ ನಂಬಿಕೆ ಇದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply