ಇತ್ತ ಇಸ್ರೇಲ್‌ ಆಡಿಯೋ ರಿಲೀಸ್‌! ಅತ್ತ ಹಮಾಸ್‌ ವಿಡಿಯೋ ರಿಲೀಸ್‌!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧ ಜನವರಿ 14ಕ್ಕೆ 100 ದಿನಗಳನ್ನ ಕಂಪ್ಲೀಟ್‌ ಮಾಡಿದ್ದು, ಇಸ್ರೇಲ್‌ ಆಡಿಯೋ ಒಂದನ್ನ ರಿಲೀಸ್‌ ಮಾಡಿದೆ. ಹಮಾಸ್‌ ಹಿಂಸಾಚಾರಗಳನ್ನ ಖಂಡಿಸಿ ಇಸ್ರೇಲ್‌ ರಕ್ಷಣಾ ಪಡೆಯೊಂದಿಗೆ ಮಾತನಾಡಿರೊ ಗಾಜಾ ಜನರ ವಾಯ್ಸ್‌ ರೆಕಾರ್ಡ್‌ನ್ನ ರಿಲೀಸ್‌ ಮಾಡಿದೆ. ಈ ಆಡಿಯೋದಲ್ಲಿ ಗಾಜಾ ನಾಗರಿಕರೊಬ್ರು, ʻಹಮಾಸ್‌ ಪಡೆಗಳು ಪ್ಯಾಲಸ್ತೀನ್‌ ಹೊರಗಡೆಯಿರೋ ಹೋಟೆಲ್‌ಗಳಲ್ಲಿ ಕೂತ್ಕೊಂಡಿದ್ದಾರೆ. ಅವ್ರನ್ನ ಸಾಯಿಸ್ಲೇಬೇಕು. ನಾನು ಎಲ್ಲಾ ಗಾಜಾ ನಾಗರಿಕರ ಪರವಾಗಿ ಹೇಳ್ತಿದ್ದೇನೆ, ಅವ್ರನ್ನ ಹತ್ಯೆ ಮಾಡಿ. ಹಮಾಸ್‌ ನಮ್ಮನ್ನ 100 ವರ್ಷಗಳ ಹಿಂದಕ್ಕೆ ತೆಗೆದ್ಕೊಂಡು ಹೋಗಿದ್ದಾರೆ. ಅವ್ರಿಗೆ ಶಿಕ್ಷೆಯಾಗ್ಲೇಬೇಕು. ದೇವರು ಅವ್ರಿಗೆ ಶಾಪ ನೀಡ್ಲಿʼ ಅಂತ ಹೇಳಿದ್ದಾರೆ. ಇದೇ ವೇಳೆ ಹಮಾಸ್‌ ಕೂಡ 37 ಸೆಕೆಂಡ್‌ಗಳ ಶಾರ್ಟ್‌ ವಿಡಿಯೋ ಒಂದನ್ನ ರಿಲೀಸ್‌ ಮಾಡಿ ಬೆದರಿಕೆ ನೀಡಿದೆ. ಇದ್ರಲ್ಲಿ ಹಮಾಸ್‌ ಕಪಿಮುಷ್ಟಿಯಲ್ಲಿರೋ 3 ಇಸ್ರೇಲಿ ಒತ್ತೆಯಾಳುಗಳನ್ನ ತೋರಿಸಲಾಗಿದೆ. ʻಇಸ್ರೇಲ್‌ ಸರ್ಕಾರ ಈ ಕೂಡಲೇ ಯುದ್ಧ ನಿಲ್ಲಿಸಿ, ಈ ಒತ್ತೆಯಾಳುಗಳು ರಿಲೀಸ್‌ ಆಗೋ ಹಾಗೇ ಮಾಡಿ…ಇಲ್ಲ ನಾಳೆ ಈ ಒತ್ತೆಯಾಳುಗಳ ಹಣೆಬರಹ ಏನು ಅಂತ ತಿಳಿಸ್ತೀವಿʼ ಅಂತ ಬೆದರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply