ಹಮಾಸ್‌ ಸೋಲಿಸೋಕೆ ಇನ್ನೂ ಹಲವು ತಿಂಗಳುಗಳೇ ಬೇಕು: ಇಸ್ರೇಲ್‌

masthmagaa.com:

ಇಸ್ರೇಲ್‌ ಪ್ರವಾಸದಲ್ಲಿರೋ ಅಮೆರಿಕ ರಾಷ್ಟ್ರೀಯ ಭದ್ರತಾ ಸಲೆಹೆಗಾರ ಜೇಕ್‌ ಸಲಿವನ್‌ಗೆ ಇಸ್ರೇಲ್‌ ರಕ್ಷಣಾ ಸಚಿವ ಮೆಸೇಜ್ ಒಂದನ್ನ ನೀಡಿದ್ದಾರೆ. ʻಹಮಾಸ್‌ ವಿರುದ್ಧ ಸಂಪೂರ್ಣ ಗೆಲುವು ಸಿಗೋ ವರೆಗೂ ನಾವು ಫೈಟ್‌ ಮಾಡ್ತೀವಿ. ಇದಕ್ಕೆ ಹಲವು ತಿಂಗಳುಗಳೇ ಬೇಕಾಗ್ಬೋದು. ನಮ್ಮ ಸೈನಿಕರ ತ್ಯಾಗ ವ್ಯರ್ಥ ಆಗೋಕೆ ಬಿಡಲ್ಲʼ ಅಂತ ಸಚಿವ ಯೊಹಾವ್‌ ಗಲಾಂಟ್ ಹೇಳಿದ್ದಾರೆ. ಗಾಜಾದಲ್ಲಿ ನಾಗರೀಕರ ಸಾವಿನ ಬಗ್ಗೆ‌ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರದ ಮಾತುಕತೆಗೆ ಜೇಕ್‌ ಸಲಿವನ್‌ ಇಸ್ರೇಲ್‌ಗೆ ಬಂದಿದ್ದಾರೆ. ಆದ್ರೆ ಇಸ್ರೇಲ್‌ ನಿಲುವು ಮಾತ್ರ ಚೇಂಜ್‌ ಆಗೋತರ ಕಾಣಿಸ್ತಿಲ್ಲ.

-masthmagaa.com

Contact Us for Advertisement

Leave a Reply