ಗಾಜಾದಲ್ಲಿ ಮತ್ತೊಮ್ಮೆ ಸೀಜ್‌ ಫೈರ್?‌ ಸ್ಪೆಷಲ್‌ ಪವರ್‌ ಬಳಸಿದ ವಿಶ್ವಸಂಸ್ಥೆ ಮುಖ್ಯಸ್ಥ!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧ 3ನೇ ತಿಂಗಳಿಗೆ ಕಾಲಿಟ್ಟಿದ್ದು, ಇದೀಗ ಹಮಾಸ್‌ ಮುಖ್ಯಸ್ಥರನ್ನ ಬಂಧಿಸೋಕೆ ತುಂಬಾ ಹತ್ತಿರದಲ್ಲಿದ್ದೇವೆ ಅಂತ ಇಸ್ರೇಲ್‌ ಸೇನೆ ಹೇಳಿಕೊಂಡಿದೆ. ದಕ್ಷಿಣ ಗಾಜಾದ ಖಾನ್‌ ಯುನೀಸ್‌ ನಗರದಲ್ಲಿ ಸಿನ್ವರ್‌ ಅಡಗಿರೋ ನಿರೀಕ್ಷೆ ಇದೆ. ಇನ್ನೇನು ನಾವು ಖಾನ್‌ ಯುನೀಸನ್ನ ಸಂಪೂರ್ಣವಾಗಿ ಕಂಟ್ರೋಲ್‌ಗೆ ತಗೊಳ್ಳಿದ್ದೇವೆ ಅಂತ IDF ಹೇಳಿದೆ. ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಸಹ ಯಾವುದೇ ಸಮಯದಲ್ಲಾದ್ರು ಹಮಾಸ್‌ ಚೀಫ್‌ ನಮ್ಮ ಕೈಗೆ ಸಿಗ್ಬೋದು ಅಂದಿದ್ದಾರೆ. ಇನ್ನೊಂದ್‌ ಕಡೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್‌ ತಮ್ಮ ಸ್ಪೆಷಲ್‌ ಪವರ್‌ ಬಳಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ವಾರ್ನಿಂಗ್ ನೀಡಿದ್ದಾರೆ. ಗಾಜಾದಲ್ಲಿ ʻhumanitarian catastropheʼ ಅಥ್ವಾ ಮಾನವೀಯತೆಯ ವಿನಾಶ ಸಂಭವಿಸೋದು ಹತ್ತಿರವಾಗ್ತಿದೆ. ಇಮೀಡಿಯೇಟ್‌ ಆಗಿ ನೀವು ಈ ಯುದ್ಧದಲ್ಲಿ ಕದನ ವಿರಾಮ ಘೋಷಿಸಿ ಅಂತ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳಿಗೆ ವಾರ್ನಿಂಗ್‌ ನೀಡಿದ್ದಾರೆ. ಇದರ ಬೆನ್ನಲ್ಲೇ ಗುಟೆರಸ್‌ ಹಮಾಸ್‌ ಬೆನ್ನಿಗೆ ನಿಲ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿರೋ ಇಸ್ರೇಲ್‌ ತನ್ನ ದಾಳಿಯನ್ನ ಮುಂದುವರೆಸಿದೆ. ಅಮೆರಿಕ ನಿರ್ಮಿತ ವೆಪನ್ಸ್‌ ಗೈಡೆನ್ಸ್‌ ಸಿಸ್ಟಮ್‌ ಬಳಸಿ ವಾಯುದಾಳಿಗಳನ್ನ ಇನ್ನಷ್ಟು ನಿಖರವಾಗಿ ಮಾಡತೊಡಗಿದೆ. ಇತ್ತ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಗಾಜಾದಲ್ಲಿ ಕರುಣೆ ಇಲ್ಲದೆ ಸ್ಪೋಟಕಗಳಿಂದ ದಾಳಿ ಮಾಡ್ಲಾಗ್ತಿದೆ. ಭಾರತ ಅಂತಾರಾಷ್ಟ್ರೀಯ ಸಮುದಾಯದ ಸದಸ್ಯನಾಗಿ ಈ ಯುದ್ಧದಲ್ಲಿ ಕದನ ವಿರಾಮ ತರೋಕೆ ಎಲ್ಲಾ ಪ್ರಯತ್ನಗಳನ್ನ ಮಾಡ್ಬೇಕು ಅಂದಿದ್ದಾರೆ.

-masthmagaa.com

Contact Us for Advertisement

Leave a Reply