ಇಸ್ರೇಲ್‌ ಮೇಲೆ ಹೆಜ್ಬೊಲ್ಲಾ ದಾಳಿ: ತಿರುಗಿ ಬಿದ್ದ ಇಸ್ರೇಲ್‌ನಿಂದ ಬಾಂಬ್‌ ಸುರಿಮಳೆ!

masthmagaa.com:

ಇಸ್ರೇಲ್‌ – ಹಮಾಸ್‌ ನಡುವಿನ ಸಂಘರ್ಷದ ನಡುವೆ, ಕಳೆದ 24 ಗಂಟೆಗಳಿಂದ ಹೆಜ್ಬೊಲ್ಲಾ ಉಗ್ರ ಸಂಘಟನೆ ಇಸ್ರೇಲ್‌ ಮೇಲೆ ತೀವ್ರ ದಾಳಿ ನಡೆಸ್ತಾ ಇದೆ. ದಕ್ಷಿಣ ಲೆಬನನ್‌ ಭಾಗದಿಂದ ರಾಕೆಟ್‌ ಮತ್ತು ಕ್ಷಿಪಣಿ ದಾಳಿಯನ್ನ ಹೆಜ್ಬೊಲ್ಲಾ ಮಾಡ್ತಾ ಇದೆ. ಇದಕ್ಕೆ ಪ್ರತ್ಯತ್ತರವಾಗಿ ಇಸ್ರೇಲ್‌ ರಕ್ಷಣಾ ಪಡೆಗಳು ಹೆಜ್ಬೊಲ್ಲಾ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಕೆಲ ಮಿಲಿಟರಿ ಟಾರ್ಗೆಟ್‌ಗಳನ್ನ ನಾಶ ಪಡಿಸಿವೆ. ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಹೆಜ್ಬೊಲ್ಲಾ ಮಿಲಿಟರಿ ನೆಲೆಗಳ ಮೇಲೆ ಟಾರ್ಗೆಟ್‌ ಮಾಡಲಾಗಿದೆ. ಹೆಜ್ಬೊಲ್ಲಾ ಮಿಲಿಟರಿ ಕಂಪೌಂಡ್‌ ಮತ್ತು ಶತ್ರುಗಳ ಚಲನವಲನಗಳನ್ನ ಗಮನಿಸೋದಕ್ಕೆ ನಿರ್ಮಿಸಲಾದ ವೀಕ್ಷಣಾ ಪೋಸ್ಟ್‌ ಮೇಲೆ ವಾಯುದಾಳಿ ನಡೆಸಿ ಸಂಪೂರ್ಣವಾಗಿ ನಾಶ ಮಾಡಲಾಗಿದೆ.

-masthmagaa.com

Contact Us for Advertisement

Leave a Reply