ಇಸ್ರೇಲ್‌ ಒಳಗೇ ಬಿರುಕು! ನೆತನ್ಯಾಹುಗೆ ಇಸ್ರೇಲ್‌ ರಕ್ಷಣಾ ಸಚಿವನ ಸವಾಲು!

masthmagaa.com:

ಹಮಾಸ್‌ ವಿರುದ್ದದ ಯುದ್ದ ಗೆದ್ದು… ಗಾಜಾವನ್ನ ಆಳಬೇಕನ್ನೋ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವ್ರ ಕನಸು ಭಗ್ನವಾಗುವಂತಿದೆ. ಯಾಕಂದ್ರೆ ಇಡೀ ಜಗತ್ತಿನಿಂದ ವಿರೋಧ ವ್ಯಕ್ತವಾಗ್ತಿರೋದು ಸಾಲದು ಅಂತ ಇದೀಗ ಇಸ್ರೇಲ್‌ ಕ್ಯಾಬಿನೆಟ್‌ ಒಳಗೇನೇ ವಿರೋಧ ಕೇಳಿಬಂದಿದೆ… ಇಸ್ರೇಲ್‌ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವ್ರಿಗೆ ಪಬ್ಲಿಕ್‌ನಲ್ಲೇ ಚಾಲೆಂಜ್‌ ಮಾಡಿದ್ದಾರೆ. ಯುದ್ಧದ ನಂತ್ರ, ಇಸ್ರೇಲ್‌ ಗಾಜಾ ಮೇಲೆ ನಿಯಂತ್ರಣ ಹೇರೋದನ್ನ ವಿರೋಧಿಸೋದಾಗಿ ಪ್ರತಿಜ್ಞೆ ಮಾಡಿದ್ದಾರೆ. ʻಗಾಜಾ ಯುದ್ದ ನಂತ್ರ, ಇಸ್ರೇಲ್‌ ಗಾಜಾವನ್ನ ಕಂಟ್ರೋಲ್‌ ತಗಳೋದಿಲ್ಲ. ಗಾಜಾದಲ್ಲಿ ಇಸ್ರೇಲ್‌ ಸೇನಾಧಿಕಾರವನ್ನ ಸ್ಥಾಪಿಸೋದಿಲ್ಲ. ಗಾಜಾದಲ್ಲಿ ಹಮಾಸ್‌ ಆಡಳಿತ ಬದಲು ಬೇರೆ ಪರ್ಯಾಯ ಆಡಳಿತವನ್ನ ರಚಿಸ್ಬೇಕು ಅಂತ ಸಾರ್ವಜನಿಕವಾಗಿ ಡಿಕ್ಲೇರ್‌ ಮಾಡುವಂತೆ ನಾನು ಬೆಂಜಮಿನ್‌ ನೆತನ್ಯಾಹು ಅವ್ರಿಗೆ ಕೇಳ್ಕೊಳ್ತೀದೀನಿʼ ಅಂತ ಗ್ಯಾಲಂಟ್‌ ಹೇಳಿದ್ದಾರೆ. ಅಂದ್ಹಾಗೆ ಈ ಹಿಂದೆ ಕೂಡ ಗ್ಯಾಲಂಟ್‌ ಅವ್ರು ಇದೇ ರೀತಿ… ಅಂದ್ರೆ ಗಾಜಾದಲ್ಲಿ ಇಸ್ರೇಲ್‌ ಕಂಟ್ರೋಲ್‌ ವಿರೋಧಿಸಿ ಹೇಳಿಕೆ ನೀಡಿದ್ರು. ಆದ್ರೆ ಈ ಬಾರಿ ಡೈರೆಕ್ಟ್‌ ನೆತನ್ಯಾಹುಗೆ ಸವಾಲು ಹಾಕುವ ರೀತಿಯಲ್ಲಿ ಮಾತಾಡಿದ್ದಾರೆ…

ಇನ್ನೊಂದ್ಕಡೆ ರಫಾ ನಗರದ ಮೇಲೆ ದಾಳಿ ನಡೆಸಿದ್ರೆ…. ಅಮಾಯಕ ನಾಗರಿಕರು ಪ್ರಾಣ ಕಳೆದುಕೊಳ್ಳಬೇಕಾಗುತ್ತೆ ಅಂತ ಹೆಚ್ಚಿನ ರಾಷ್ಟ್ರಗಳು ಇಸೇಲ್‌ ನಡೆಯನ್ನ ವಿರೋಧಿಸ್ತಿವೆ. ಆದ್ರೆ ಬೆಂಜಮಿನ್‌ ನೆತನ್ಯಾಹು ಮಾತ್ರ, ʻರಫಾದಲ್ಲಿ ಇಸ್ರೇಲ್‌ ದಾಳಿಯಿಂದ ಯಾವ್ದೇ ರೀತಿ ಮಾನವೀಯ ಬಿಕ್ಕಟ್ಟು ಅಥ್ವಾ ನಾಗರಿಕರ ಹತ್ಯೆ ಆಗೋದಿಲ್ಲ. ಯಾಕಂದ್ರೆ ನಾವು ಅವ್ರಿಗೆ ಆಲ್ರೆಡಿ ಸ್ಥಳಾಂತರವಾಗೋಕೆ ವಾರ್ನಿಂಗ್‌ ನೀಡಿದ್ದು, ಸುಮಾರು 5 ಲಕ್ಷ ಪ್ಯಾಲೆಸ್ತೀನರು ಜಾಗ ಖಾಲಿ ಮಾಡಿದ್ದಾರೆʼ ಅಂತೇಳಿದ್ದಾರೆ. ಆದ್ರೆ ಗಾಜಾದಲ್ಲಿರೋ ಚಿತ್ರಣವೇ ಬೇರೆ. ಇಸ್ರೇಲ್‌ ದಾಳಿಗೆ ಗಾಯಗೊಂಡಿರೋ ಪ್ಯಾಲೆಸ್ತೀನರು ರಫಾ ಕ್ರಾಸಿಂಗ್‌ ಬಂದ್‌ ಮಾಡಿರೋದ್ರಿಂದ ಚಿಕಿತ್ಸೆ ಪಡೆಯೋಕಾಗದೇ ಸಿಲುಕಿಕೊಂಡಿದ್ದಾರೆ. ಈಜಿಪ್ಟ್‌ಗೂ ಹೋಗೋಕಾಗದೇ…. ಗಾಜಾದಲ್ಲಿ ಇರೋಕಾಗದೇ ಒದ್ದಾಡ್ತಿದ್ದಾರೆ ಅನ್ನೋ ವರದಿಗಳು ಬರ್ತಿವೆ…

ಇನ್ನು ರಫಾದಲ್ಲಿ ಇಸ್ರೇಲ್‌ ದಾಳಿ ಖಂಡಿಸಿ ಇದೀಗ ಯುರೋಪಿಯನ್‌ ಒಕ್ಕೂಟ, ಈ ಕೂಡಲೇ ಇಸ್ರೇಲ್‌ ಕಾರ್ಯಚರಣೆ ನಿಲ್ಲಿಸುವಂತೆ ವಾರ್ನಿಂಗ್‌ ನೀಡಿದೆ. ಜೊತೆಗೆ ʻರಫಾದಲ್ಲಿ ಇಸ್ರೇಲ್‌ ದಾಳಿ ಮುಂದುವರೆಸಿದ್ರೆ…. ಯುರೋಪಿಯನ್‌ ಒಕ್ಕೂಟ ಮತ್ತು ಇಸ್ರೇಲ್‌ ನಡುವಿನ ಸಂಬಂಧ ಹಾಳಾಗುತ್ತೆʼ ಅಂತಾನೂ ಎಚ್ಚರಿಕೆ ನೀಡಿದೆ.

ಇನ್ನು ಅಮೆರಿಕ ಮತ್ತು ಕೆನಡಾ ಯುನಿವರ್ಸಿಟಿಗಳಲ್ಲಿ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ ನಡೀತಿದ್ರೆ, ಇದೀಗ ಇಸ್ರೇಲ್‌ ಸ್ವಾತಂತ್ರ್ಯ ದಿನವನ್ನ… ಇಸ್ರೇಲ್‌ ಬೆಂಬಲಿಗರು ಸೇರಿ ಆಚರಣೆ ಮಾಡಿದ್ದಾರೆ. ಈ ಆಚರಣೆ ವೇಳೆ ಪ್ಯಾಲೆಸ್ತೀನ್‌ ಬೆಂಬಲಿಗರು ಮತ್ತು ಇಸ್ರೇಲ್‌ ಬೆಂಬಲಿಗರು ಕೆನಡಾದ ಆಟ್ಟಾವಾದಲ್ಲಿ ಮುಖಾಮುಖಿಯಾಗಿದ್ದಾರೆ. ಇಸ್ರೇಲ್‌ ಬೆಂಬಲಿಗರು ಇಸ್ರೇಲ್‌ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದ್ರೆ, ಅತ್ತ ಪ್ಯಾಲೆಸ್ತೀನ್‌ ಬೆಂಬಲಿಗರು ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply