ರಫಾದಲ್ಲಿ ಇಸ್ರೇಲ್‌ ದಾಳಿ! ಕದನವಿರಾಮಕ್ಕೆ ಹಮಾಸ್‌ ಒಪ್ಪಿಗೆ!

masthmagaa.com:

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಕಾಳಗದಲ್ಲಿ ಮತ್ತೊಂದು ದೊಡ್ಡ ಬೆಳವಣಿಗೆಯಾಗಿದೆ. ಜಾಗತಿಕವಾಗಿ ತೀವ್ರ ಪ್ರತಿರೋಧ ಕೇಳಿ ಬರ್ತಿರೋ ನಡುವೆಯೇ ಇಸ್ರೇಲ್‌ ರಫಾ ನಗರದ ಮೇಲೆ ಭೀಕರ ದಾಳಿ ಶುರು ಮಾಡಿದೆ. ರಫಾ ನಗರದ ಜನರಿಗೆ ಬೇರೆ ಜಾಗಕ್ಕೆ ಶಿಫ್ಟ್‌ ಆಗಿ ಅಂತ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಕಾರ್ಯಚರಣೆ ಆರಂಭವಾಗಿದೆ. ಹೀಗಂತ ಅಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಇತ್ತ ಇಸ್ರೇಲ್‌ನ ಈ ದಾಳಿ ಬೆನ್ನಲ್ಲೇ ಹಮಾಸ್‌ ಗಾಜಾ ಕದನವಿರಾಮಕ್ಕೆ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಹಮಾಸ್‌ ಹಿರಿಯ ಅಧಿಕಾರಿ, ʻಗಾಜಾ ಕದನವಿರಾಮಕ್ಕೆ ನಾವು ಒಪ್ಪಿಗೆ ಸೂಚಿಸಿದ್ದೇವೆ. ಈಗ ಯುದ್ದ ಕೊನೆಯಾಗ್ಬೇಕೋ ಬೇಡ್ವೋ ಅನ್ನೋದು ಇಸ್ರೇಲ್‌ಗೆ ಬಿಟ್ಟ ವಿಚಾರ ಅಂತೇಳಿದೆ.

-masthmagaa.com

Contact Us for Advertisement

Leave a Reply