ಟಾರ್ಗೆಟ್ ದಕ್ಷಿಣ ಗಾಜಾ! ಫೈಟರ್‌ ಜೆಟ್‌ ನುಗ್ಗಿಸಿದ ಇಸ್ರೇಲ್!

masthmagaa.com:

ಗಾಜಾ ಪಟ್ಟಿಯಾದ್ಯಂತ ನಾವು ನುಗ್ಗದೇ ಇರುವ ಸ್ಥಳವೇ ಇಲ್ಲ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ರು. ಇದರ ಬೆನ್ನಲ್ಲೇ ದಕ್ಷಿಣ ಗಾಜಾ ಪಟ್ಟಿಯ ಕೆಲವು ಭಾಗದ ನಿವಾಸಿಗಳಿಗೆ ಅಲ್ಲಿಂದ ಜಾಗ ಖಾಲಿ ಮಾಡುವಂತೆ ನೋಟಿಸ್‌ ಬಂದಿದೆ ಅಂತ ಗೊತ್ತಾಗಿದೆ. ಈ ಮೂಲಕ ಇಸ್ರೇಲ್‌ ತನ್ನ ಕಾರ್ಯಾಚರಣೆಯನ್ನ ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ವಿಸ್ತರಣೆ ಮಾಡೋ ಸೂಚನೆ ಕೊಟ್ಟಿದೆ ಎನ್ನಲಾಗ್ತಿದೆ. ಯುದ್ಧ ಶುರುವಾದಾಗಿನಿಂದ ಇಲ್ಲಿಯವರೆಗೂ ಹಮಾಸ್‌ ವಿರುದ್ಧ ನಾವು ದಾಳಿ ಮಾಡ್ತಿದಿವಿ. ಹೀಗಾಗಿ ಉತ್ತರದಲ್ಲಿರೋರು ದಕ್ಷಿಣಕ್ಕೆ ಹೋಗಿ ತಮ್ಮ ಪ್ರಾಣ ಉಳಿಸಿಕೊಳ್ಳಿ ಅಂತ ಹೇಳ್ತಿದ್ದ ಇಸ್ರೇಲ್‌, ಈಗ ದಕ್ಷಿಣ ಗಾಜಾದ ಜನರಿಗೂ ಜಾಗ ಖಾಲಿ ಮಾಡುವಂತೆ ಹೇಳ್ತಿರೋದು ಅಚ್ಚರಿ ಮೂಡಿಸಿದೆ. ಈಗಾಗಲೇ ಗಾಜಾ ಪಟ್ಟಿ ನಮ್ಮ ಕಂಟ್ರೋಲ್‌ನಲ್ಲಿದೆ ಅಂತ ಹೇಳಿಕೊಂಡಿರೋ ಇಸ್ರೇಲ್‌, ಇನ್ನೇನು ಸಂಪೂರ್ಣ ವಶಪಡಿಸಿಕೊಳ್ಳಲು ಮುಂದಾಗಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಇನ್ನು ದಕ್ಷಿಣ ಗಾಜಾವನ್ನೂ ಖಾಲಿ ಮಾಡುವಂತೆ ಬಂದಿರೋ ನೋಟಿಸ್‌ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ.

ಇತ್ತ ನಿನ್ನೆ ತಡರಾತ್ರಿ ಹಮಾಸ್‌ನ ಪೊಲಿಟಿಕಲ್‌ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇಹ್‌ನ ನಿವಾಸದ ಮೇಲೆ ಫೈಟರ್‌ ಜೆಟ್‌ಗಳಿಂದ ದಾಳಿ ನಡೆಸಲಾಗಿದೆ. ಈತನ ಈ ನಿವಾಸದಲ್ಲಿ ಇಸ್ರೇಲ್‌ ಮೇಲೆ ದಾಳಿ ನಡೆಸುವ ಕುರಿತು ಮೀಟಿಂಗ್‌ ಮಾಡಲಾಗ್ತಿತ್ತು. ಇಲ್ಲಿಯೇ ಹಮಾಸ್‌ ಲೀಡರ್‌ಗಳು ಭಯೋತ್ಪಾದಕ ದಾಳಿಗಳಿಗೆ ನಿರ್ದೇಶನ ನೀಡ್ತಿದ್ರು ಅಂತ ಇಸ್ರೇಲ್‌ ಸೇನೆ ಹೇಳಿದೆ.

-masthmagaa.com

Contact Us for Advertisement

Leave a Reply