ಗಾಜಾ ಬಗ್ಗೆ ಪ್ಲ್ಯಾನ್‌: ಅರಬ್‌, ಯುಎಸ್‌ಗಳೊಡನೆ ಇಸ್ರೇಲ್‌ ಮಾತುಕತೆ!

masthmagaa.com:

ಗಾಜಾ ಯುದ್ಧದ ಬಗ್ಗೆ ಸದ್ಯ ಮೌನ ವಹಿಸಿರೋ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇದೀಗ ಒಳಗಿಂದೊಳಗೆ ಗಾಜಾ ಯುದ್ಧದ ನಂತರದ ಪ್ಲಾನ್‌ಗಳನ್ನ ರಚಿಸ್ತಿದ್ದಾರೆ. ಒಂದು ಕಡೆ ತನ್ನ ಕಟ್ಟರ್‌ ಬಲಪಂಥಿಯ ಮಿತ್ರ ಪಕ್ಷಗಳು ಗಾಜಾದಲ್ಲಿ ಇಸ್ರೇಲಿ ಸೆಟಲ್‌ಮೆಂಟ್‌ಗಳನ್ನ ಇರಿಸ್ಬೇಕು ಅಂತಿವೆ. ಮತ್ತೊಂದ್‌ ಕಡೆ ವಿದೇಶಿ ಮಿತ್ರರು ಇಲ್ಲ ಪ್ಯಾಲೆಸ್ತೇನ್‌ ಆಡಳಿತಕ್ಕೆ ವಹಿಸ್ಬೇಕು ಅಂತಿವೆ. ಈಗ ಎರಡನ್ನೂ ಬ್ಯಾಲೆನ್ಸ್‌ ಮಾಡೊಕೆ ನೆತನ್ಯಾಹು ಕೈ ಹಾಕಿದ್ದಾರೆ. ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಸೇರಿ ಡಿಸ್‌ಕಸ್‌ ಮಾಡ್ತಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದ್ರ ಪ್ರಕಾರ ಗಾಜಾ ಆಡಳಿತದಲ್ಲಿ ಈಜಿಪ್ಟ್‌, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಅರಬ್‌ ರಾಷ್ಟ್ರಗಳಿಗೂ ಪಾಲು ನೀಡಲಿದೆ. ಅಮೆರಿಕ ಕೂಡ ಇದ್ರಲ್ಲಿ ಇರುತ್ತೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply