10 ವರ್ಷಗಳ ನಂತರ ತಮ್ಮ ಸಂಬಂಧಗಳನ್ನ ಸರಿ ಮಾಡೋಕೆ ಮುಂದಾದ ಇಸ್ರೇಲ್‌ ಹಾಗೂ ಟರ್ಕಿ!

masthmagaa.com:

ದಶಕದಿಂದ ಮುರಿದು ಬಿದ್ದಿದ್ದ ಇಸ್ರೇಲ್‌-ಟರ್ಕಿ ಸಂಬಂಧಗಳನ್ನ ಮತ್ತೆ ಸರಿ ಮಾಡೋ ನಿಟ್ಟಿನಲ್ಲಿ ಇಸ್ರೇಲ್‌ನ ರಕ್ಷಣಾ ಸಚಿವ ಬೆನ್ನಿ ಗ್ಯಾಂಜ್‌ ಒಂದು ದಿನದ ಟರ್ಕಿ ಪ್ರವಾಸ ಕೈಗೊಂಡಿದ್ದಾರೆ. ಟರ್ಕಿ ಅಧ್ಯಕ್ಷ ತಾಯಿಪ್‌ ಎರ್ಡೋಆನ್‌ ಹಾಗೂ ರಕ್ಷಣಾ ಸಚಿವ ಹುಲುಸಿ ಅಕರ್‌ ಅವ್ರ ಜೊತೆ ಸಭೆ ನಡೆಸಿದ್ದಾರೆ. ʻಒಂದು ದಶಕಕ್ಕಿಂತಲೂ ಅಧಿಕ ಸಮಯ ಉಭಯ ದೇಶಗಳ ನಡುವೆ ಫಾರ್ಮಲ್‌ ಆಗಿ ಯಾವುದೇ ಭದ್ರತಾ ಸಂಬಂಧಗಳಿರಲ್ಲಿಲ್ಲ. ಇಂದು ಇಸ್ರೇಲ್‌ ಹಿತಾಸಕ್ತಿಗಳಿಗೆ ಅನುಗುಣವಾಗಿ ಅದನ್ನ ಚೇಂಜ್‌ ಮಾಡ್ತಿದೀವಿ ಅಂತ ಬೆನ್ನಿ ಹೇಳಿದ್ದಾರೆ. ಅಂದ್ಹಾಗೆ 1949ರಲ್ಲಿ ಇಸ್ರೇಲ್‌ನ್ನ ದೇಶವಾಗಿ ಗುರುತಿಸಿದ ಮೊದಲ ಮುಸ್ಲಿಂ ಪ್ರಧಾನ ದೇಶ ಟರ್ಕಿಯಾಗಿತ್ತು. ಆದರೆ 2008ರಲ್ಲಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ನ ಸೇನಾ ಕಾರ್ಯಾಚರಣೆಯಿಂದ ಉಭಯ ದೇಶಗಳ ಸಂಬಂಧಗಳು ಮತ್ತೆ ಹದಗೆಡೋಕೆ ಶುರುವಾಗಿತ್ತು. 2010ರಲ್ಲಿ ಟರ್ಕಿಯ ಮಾವಿ ಮರ್‌ಮರಾ ಶಿಪ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿ, 10 ನಾಗರಿಕರು ಮೃತಪಟ್ಟಿದ್ರು. ಆಗ ಎರಡು ದೇಶಗಳ ಸಂಬಂಧ ಕಂಪ್ಲೀಟ್‌ಆಗಿ ಫ್ರೀಜ್‌ ಆಗಿದ್ವು. ನಂತರ ಈ ವರ್ಷ ಆಗಸ್ಟ್‌ನಲ್ಲಿ ಉಭಯ ದೇಶಗಳ ಎಲ್ಲ ಸಂಬಂಧಗಳನ್ನ ಮರುಸ್ಥಾಪಿಸೋಕೆ ಇಸ್ರೇಲ್‌ ಹಾಗೂ ಟರ್ಕಿ ಅನೌನ್ಸ್‌ ಮಾಡಿದ್ವು.

-masthmagaa.com

Contact Us for Advertisement

Leave a Reply