ಇಸ್ರೇಲ್‌ನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬೆಂಜಮಿನ್‌ ನೆತನ್ಯಾಹು!

masthmagaa.com:

ಇಸ್ರೇಲ್‌ನ ನೂತನ ಪ್ರಧಾನಿಯಾಗಿ ಬೆಂಜಮಿನ್‌ ನೆತನ್ಯಾಹು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದ್ರೊಂದಿಗೆ ಇಸ್ರೇಲ್‌ ಇತಿಹಾಸದಲ್ಲೇ ಕಟ್ಟಾ ಬಲಪಂಥೀಯ ಸರ್ಕಾರವನ್ನ ನೆತನ್ಯಾಹು ರಚಿಸಿದಂತಾಗಿದೆ. 120 ಸದಸ್ಯ ಬಲದ ಅಲ್ಲಿನ ಸಂಸತ್ತಿನಲ್ಲಿ 63 ಸದಸ್ಯರು ನೆತನ್ಯಾಹು ಪರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೆತನ್ಯಾಹು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಂದ್ಹಾಗೆ ಈ ಹಿಂದೆ 1996 ರಿಂದ 1999 ಹಾಗೂ 2009ರಿಂದ 2021ರ ಅವಧಿಯಲ್ಲಿ ಕೂಡ ಇಸ್ರೇಲ್‌ನ ಪ್ರಧಾನಿಯಾಗಿ ನೆತನ್ಯಾಹು ಕಾರ್ಯನಿರ್ವಹಿಸಿದ್ರು. ಇನ್ನು ನೆತನ್ಯಾಹು ಅವ್ರಿಗೆ ಹಲವು ದೇಶಗಳ ನಾಯಕರು ಅಭಿನಂದನೆಯನ್ನ ತಿಳಿಸಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನೆತನ್ಯಾಹು ಅವ್ರಿಗೆ ಅಭಿನಂದನೆಯನ್ನ ತಿಳಿಸಿ, ನಿಮ್ಮ ನೇತೃತ್ವದ ಸರ್ಕಾರದ ಅಡಿಯಲ್ಲಿ ಉಭಯ ದೇಶಗಳ ನಡುವಿನ ಸಹಕಾರ ಇನ್ನಷ್ಟು ಗಟ್ಟಿಯಾಗುತ್ತೆ ಅಂತ ನಾನು ಆಶಿಸುತ್ತೇನೆ. ಜೊತೆಗೆ ಮಧ್ಯ ಏಷ್ಯಾದ ಎಲ್ಲಾ ಕ್ಷೇತ್ರಗಳಲ್ಲೂ ಶಾಂತಿ ಮತ್ತು ಭದ್ರತೆಯನ್ನ ಕಾಪಾಡೋಕೆ ಆಸಕ್ತಿಯನ್ನ ಹೊಂದಿದಿವಿ ಅಂತ ಪುಟಿನ್‌ ಹೇಳಿದ್ದಾರೆ. ಇತ್ತ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಕೂಡ ನೆತನ್ಯಾಹು ಅವ್ರಿಗೆ ಶುಭ ಹಾರೈಸಿದ್ದಾರೆ. ಇನ್ನೊಂದ್‌ ಕಡೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವ್ರು ನೆತನ್ಯಾಹು ಅವ್ರಿಗೆ ವಿಶ್‌ ಮಾಡಿದ್ದಾರೆ. ಹಲವು ದಶಕಗಳಿಂದ ನನ್ನ ಸ್ನೇಹಿತನಾಗಿರೋ ಪ್ರಧಾನಿ ನೆತನ್ಯಾಹು ಜೊತೆಗೆ ಕೆಲಸ ಮಾಡೋಕೆ ನಾನು ಎದುರು ನೋಡ್ತಾ ಇದೀನಿ ಅಂತ ಬೈಡೆನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply