ಮುಂದುವರೆದ ಇಸ್ರೋ ಮೂನ್‌ ಮಿಷನ್‌! ಚಂದ್ರಯಾನ-4 ಸಜ್ಜು!

masthmagaa.com:

ಇಸ್ರೋ… ಬಾಹ್ಯಾಕಾಶದ ಅಚ್ಚರಿಗಳನ್ನ ತಿಳಿಯೋಕೆ ಕಳೆದ ಒಂದು ವರ್ಷದಿಂದ ಇಡೀ ಜಗತ್ತಿಗೆ ಬ್ಯಾಕ್‌ ಟು ಬ್ಯಾಕ್‌ ಶಾಕ್‌ ನೀಡ್ತಿದೆ. ತಮ್ಮ ಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಮೂಲಕ ಭಾರತೀಯರನ್ನ ರೋಮಾಂಚನಗೊಳಿಸ್ತಿದೆ. ಕಳೆದ ವರ್ಷದ ಯಶಸ್ವಿ ʻಚಂದ್ರಯಾನ-3ʼ ಮಿಷನ್‌ ನಂತ್ರ ಇದೀಗ ಇಸ್ರೋ ಇನ್ನಷ್ಟು ಕ್ರೇಜಿಯಾಗಿದೆ…ಹೊಸ ಸಾಹಸಕ್ಕೆ ಮುಂದಾಗಿದೆ. ಯಾಕಂದ್ರೆ ಇಸ್ರೋನ ಚಂದ್ರಯಾನ ಮಿಷನ್‌ ಇಲ್ಲಿಗೆ ಮುಗಿದಿಲ್ಲ….ಚಂದ್ರಯಾನ ಮಿಷನ್‌ ರಿಟರ್ನ್ಸ್‌! ʻಚಂದ್ರಯಾನ ಮಿಷನ್‌ – 4ʼ ಲಾಂಚ್‌ ಮಾಡೋಕೆ ಇದೀಗ ಇಸ್ರೋ ಪ್ಲಾನ್‌ ರೆಡಿಯಾಗ್ತಿದೆ. ಹೀಗಂತ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಅವ್ರು ಹೇಳಿದ್ದಾರೆ. ಈ ಕುರಿತು ಇಸ್ರೋ ಪಡೆ ಮಾತುಕತೆ ನಡೆಸ್ತಿದೆ. ಅದಕ್ಕಾಗಿ ಹೊಸ ಡಿಸೈನ್‌ ಮತ್ತು ಹೈ-ಎಂಡ್‌ ಟೆಕ್ನಾಲಜಿ ಡೆವೆಲಪ್‌ ಮಾಡ್ತಿದೆ ಅನ್ನೋ ಮಾಹಿತಿ ಸಿಕ್ಕಿದೆ. ಆಗಸ್ಟ್‌ 2023ರಲ್ಲಿ ಚಂದ್ರನ ದಕ್ಷಿಣ ದ್ರುವಕ್ಕೆ ಕಾಲಿಟ್ಟು ಸ್ಟಡಿ ಮಾಡಿದ ʻಚಂದ್ರಯಾನ-3ʼ ಮಿಷನ್‌ನ ಸಕ್ಸೆಸ್‌ಫುಲ್‌ ಸ್ಪೇಸ್‌ ಜರ್ನಿ ನಂತ್ರ ಇದೀಗ ʻಚಂದ್ರಯಾನ-4ʼ ಮಿಷನ್‌ನ ಬಾರಿ. ಹಾಗಿದ್ರೆ…ಈ ಹೊಸ ಮೂನ್‌ ಮಿಷನ್‌ನ ಪ್ರಮುಖ ಉದ್ದೇಶವೇನು? ಏನ್‌ ಮಾಡಲಾಗುತ್ತೆ ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಈ ಮಿಷನ್‌ನ ಪ್ರಮುಖ ಗುರಿ ಅಂದ್ರೆ, ಚಂದ್ರನ ಮಣ್ಣನ್ನ ಭೂಮಿಗೆ ತರೋದು. ಎಸ್‌…ಈ ಬಾರಿಯ ಇಸ್ರೋ ಮಿಷನ್‌ ಅಷ್ಟೊಂದು ಈಸಿ ಇಲ್ಲ….ಬಹಳ ಕಾಂಪ್ಲೆಕ್ಸ್‌ ಆಗಿದೆ. ಚಂದ್ರನ ಮೇಲ್ಮೈಯಿಂದ ಭೂಮಿಗೆ ಮಣ್ಣು ಹೊತ್ತು ತರೋದಂದ್ರೆ ಸುಲಭದ ಮಾತಲ್ಲ. ಇದೀಗ ಈ ಸಾಹಸಕ್ಕೆ ಇಸ್ರೋ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಸೋಮನಾಥ್‌ ಅವ್ರು, ʻಚಂದ್ರಯಾನ- 4 ಮಿಷನ್‌ನ ಸ್ಪೇಸ್‌ಕ್ರಾಫ್ಟ್‌ನಲ್ಲಿ ಏನೆಲ್ಲಾ ಹೊಂದಿರ್ಬೇಕು ಅನ್ನೋ ಬಗ್ಗೆ ಕೆಲಸ ಮಾಡ್ತಿದ್ದೀವಿ. ಅಂದ್ರೆ ಸ್ಪೇಸ್‌ಕ್ರಾಫ್ಟ್‌ ಹೊತ್ತೊಯ್ಯೋ ಪೇಲೋಡ್‌ ಏನಾಗಿರ್ಬೇಕು ಅಂತ. ಸೋ, ಚಂದ್ರಯಾನ-4 ರಲ್ಲಿ ಅಟ್‌ಲೀಸ್ಟ್‌ ಭೂಮಿಗೆ ಚಂದ್ರನ ಮಣ್ಣಿನ ಸ್ಯಾಂಪಲ್‌ ತರಬೇಕು ಅಂತ ಡಿಸೈಡ್‌ ಮಾಡಿದ್ವಿ. ಸದ್ಯ ಈ ಬಗ್ಗೆ ಚರ್ಚೆ ನಡೀತಿದೆ. ನಮ್ಮಲ್ಲಿರೋ ರಾಕೆಟ್‌ಗಳನ್ನ ಬಳಸ್ಕೊಂಡು ಈ ಕೆಲಸ ಹೇಗೆ ಮಾಡೋದು ಅನ್ನೋದ್ರ ಬಗ್ಗೆ ಮಾತುಕತೆ ನಡೆಸ್ತಿದ್ವಿ. ಚಂದ್ರನಿಂದ ಭೂಮಿಗೆ ಮಣ್ಣು ತರೋದು ಹೇಳುವಷ್ಟು ಈಸಿಯಲ್ಲ. ಮತ್ತೊಂದು ರಾಕೆಟ್‌ ಚಂದ್ರನಿಂದ ಟೇಕ್‌ ಆಫ್‌ ಆಗಿ ಭೂಮಿಗೆ ವಾಪಾಸ್‌ ಆಗ್ಬೇಕು. ಇದು ಡಬಲ್‌ ಕೆಲಸ. ಈ ಕೆಲಸ ಮಾಡೋಕೆ ನಮ್ಮ ರಾಕೆಟ್ಸ್‌ ಸಂಪೂರ್ಣ ಸಾಮರ್ಥ್ಯವನ್ನ ಹೊಂದಿಲ್ಲ. ಸೋ ನಾವೀಗ ಹೊಸ ಡಿಸೈನ್‌ ಮೇಲೆ ವರ್ಕ್‌ ಮಾಡ್ತಿದ್ದೀವಿ. ಅದೇನಂತ ನಿಮಗೆ ಈಗ ಹೇಳಲ್ಲ… ಸದ್ಯ ಇದು ಸಿಕ್ರೇಟ್‌ ಆಗಿರಲಿದೆ. ಈ ಬಗ್ಗೆ ಸರ್ಕಾರದ ಬಳಿ ಮಾತುಕತೆ ನಡೆಸ್ಬೇಕು….ಇದಕ್ಕೆ ಎಷ್ಟು ಹಣ ಖರ್ಚಾಗುತ್ತೆ ಅಂತ ತಿಳಿಸ್ಬೇಕು. ನಂತ್ರ ಸರ್ಕಾರದಿಂದ ಅಪ್ರೂವಲ್‌ ಸಿಕ್ಕ ಮೇಲೆ ಇನ್ನಷ್ಟು ಮಾಹಿತಿ ಕೊಡ್ತೀವಿ. ಅಷ್ಟೋ ತನಕ ಪ್ಲೀಸ್‌ ವೈಟ್‌ʼ ಅಂತ ಹೇಳಿದ್ದಾರೆ. ಸದ್ಯ ಕುತೂಹಲ ಹುಟ್ಟಿಸಿರೋ ʻಚಂದ್ರಯಾನ-4ʼ ಮಿಷನ್‌ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್‌ ಮುಂದಿನ ದಿನಗಳಲ್ಲಿ ಒಂದೊಂದಾಗಿ ಸಿಗಲಿದೆ.

-masthmagaa.com

Contact Us for Advertisement

Leave a Reply