ಆದಿತ್ಯ-ಎಲ್1 ಉಡಾವಣೆಗೆ ಕ್ಷಣಗಣನೆ ಆರಂಭ!

masthmagaa.com:

ಚಂದ್ರಯಾನ-3ರ ಯಶಸ್ಸಿನ ಅಲೆಯಲ್ಲಿರೋ ಭಾರತ ಸೂರ್ಯಯಾನಕ್ಕೆ ಸಜ್ಜಾಗಿದೆ. ಇದೀಗ ಸೂರ್ಯನ ಅಧ್ಯಯನಕ್ಕೆ ಕೈಗೊಳ್ಳುತ್ತಿರುವ ಯೋಜನೆ ಆದಿತ್ಯ-ಎಲ್1 ಉಡಾವಣೆಗೆ ಕೌನ್‌ಡೌನ್‌ ಶುರುವಾಗಿದೆ. ಸೆಪ್ಟೆಂಬರ್‌ 2 ಅಂದ್ರೆ ನಾಳೆ ಬೆಳಗ್ಗೆ 11:50ಕ್ಕೆ ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ PSLV-C57 ರಾಕೆಟ್‌ ಉಡಾವಣೆಯಾಗಲಿದೆ. ಈ ಹಿನ್ನಲೆಯಲ್ಲಿ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವ್ರು ಆಂಧ್ರದ ಸುಲ್ಲೂರ್‌ಪೇಟೆಯಲ್ಲಿರುವ ಶ್ರೀ ಚೆಂಗಾಲಮ್ಮ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತಾಡಿರುವ ಸೋಮನಾಥ್‌, ಸೂರ್ಯನ ಅಧ್ಯನಕ್ಕೆ ಕೈಗೊಳ್ಳಲಾಗ್ತಿರುವ ಈ ಮಿಷನ್‌ ನಿಗದಿತ ರೇಡಿಯಸ್‌ಗೆ ತಲುಪಲು 125 ದಿನಗಳು ಬೇಕಾಗುತ್ತವೆ. ಬಳಿಕ ಆದಿತ್ಯ L1 ಸೂರ್ಯನ ಅಧ್ಯಯನ ನಡೆಸಲಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಮಿಷನ್‌ ಸೂರ್ಯ ಮತ್ತು ʻಕರೊನಾ’ ಎಂದು ಕರೆಯಲಾಗುವ ಹೊರ ವಾತಾವರಣದ ಅಧ್ಯಯನ ನಡೆಸಿ, ಸೂರ್ಯನ ವರ್ತನೆ ಮತ್ತು ಚಟುವಟಿಕೆಗಳನ್ನ ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಸಹಕರಿಸುತ್ತದೆ. ಇದರ ಬಗ್ಗೆ ನಾವು ಒಂದು ವಿಶೇಷ ವರದಿ ಮುಂಚೆಯೇ ಪಬ್ಲಿಷ್‌ ಮಾಡಿದೀವಿ. ನೀವು ಅದನ್ನ ನೋಡಿ.

-masthmagaa.com

Contact Us for Advertisement

Leave a Reply