ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ಗೆ ಕ್ಯಾನ್ಸರ್‌! ಈಗ ಗುಣಮುಖ!

masthmagaa.com:

ಇತ್ತೀಚಿನ ದಿನಗಳ ಇಸ್ರೋದ ಯಶಸ್ವಿ ಕಾರ್ಯಚರಣೆಗಳಿಗೆ ಕಾರಣರಾದ ಇಸ್ರೋ ಮುಖ್ಯಸ್ಥ ಎಸ್‌ ಸೋಮನಾಥ್‌ ಅವ್ರಿಗೆ ಕ್ಯಾನ್ಸರ್‌ ಇದೆ ಅನ್ನೋ ಶಾಕಿಂಗ್‌ ವಿಷಯ ಈಗ ಹೊರಬಿದ್ದಿದೆ. ಕಳೆದ ವರ್ಷ ಸಪ್ಟೆಂಬರ್‌ 02 ರಂದು ಆದಿತ್ಯ-ಎಲ್‌ 1 ಮಿಷನ್‌ ಲಾಂಚ್‌ ಆದ ದಿನವೇ ಇವ್ರಿಗೆ ಕ್ಯಾನ್ಸರ್‌ ಇರೋದು ಗೊತ್ತಾಗಿದೆ. ಹೀಗಂತ ಖುದ್ದು ಸೋಮನಾಥ್‌ ಅವ್ರು ಇತ್ತೀಚೆಗೆ ನಡೆದ ಇಂಟರ್‌ವ್ಯೂ ಒಂದ್ರಲ್ಲಿ ರಿವೀಲ್‌ ಮಾಡಿದ್ದಾರೆ. ಆದಿತ್ಯ ಎಲ್‌-1 ಲಾಂಚ್‌ ಆಗೋ ವೇಳೆ ಎಲ್ಲರಲ್ಲೂ ಭಾರೀ ಎಕ್ಸೈಟ್‌ಮೆಂಟ್‌ ಇತ್ತು. ಆದ್ರೆ ಸೋಮನಾಥ್‌ ಅವ್ರ ಆರೋಗ್ಯ ಮಾತ್ರ ಅನಿರೀಕ್ಷಿತ ತಿರುವು ತಗೊಂಡಿತ್ತು. ಈ ಬಗ್ಗೆ ಮಾತನಾಡಿರೋ ಅವ್ರು, ʻಚಂದ್ರಯಾನ 3 ಮಿಷನ್‌ ಲಾಂಚ್‌ ವೇಳೆ ನನಗೆ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿತ್ತು. ನಂತ್ರ ಆ ಸಮಸ್ಯೆಗಳು ಹೆಚ್ಚಾಗಿದ್ದು, ಆದಿತ್ಯ ಎಲ್‌-1 ಲಾಂಚ್‌ ಆದ ದಿನ ಬೆಳಿಗ್ಗೆ ನಾನು ಸ್ಕ್ಯಾನ್‌ ಮಾಡಿಸ್ಕೊಂಡಿದ್ದೆ. ಮಿಷನ್‌ ಲಾಂಚ್‌ ಆದ ಮರುಕ್ಷಣವೇ ನನ್ನ ಹೊಟ್ಟೇಲಿ ಕ್ಯಾನ್ಸರ್‌ ಗಡ್ಡೆ ಬೆಳದಿರೋದು ಸ್ಕಾನಿಂಗ್‌ ರಿಪೋರ್ಟ್‌ನಿಂದ ಅರಿವಾಯ್ತು. ನಂತ್ರ ನಾನು ಟ್ರೀಟ್‌ಮೆಂಟ್‌ ತಗೊಳ್ಳೋಕೆ ಶುರುಮಾಡಿದೆ. ಆಪರೇಶನ್‌, ಕೀಮೋಥೆರಪಿಗೆ ಒಳಗಾಗಿದ್ದೆ. ಈಗ ನಾನು ಗುಣಮುಖನಾಗಿದ್ದೇನೆ. ಆದ್ರೆ ಇನ್ನು ಮುಂದೇನು ಪ್ರತೀ ವರ್ಷ ರೆಗ್ಯುಲರ್‌ ಚೆಕ್‌-ಅಪ್‌, ಸ್ಕ್ಯಾನ್‌ ಮಾಡಿಸಿಕೊಳ್ಳಬೇಕಿದೆ. ಸದ್ಯಕ್ಕೆ ನನ್ನ ಡ್ಯುಟಿಗೆ ನಾನು ವಾಪಸ್ಸಾಗಿದ್ದೇನೆʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply