ಇಸ್ರೋ ಹೊಸ ಸಾಹಸ! ʻINSAT-3DSʼ ಹವಮಾನ ಉಪಗ್ರಹ ಲಾಂಚ್‌!

masthmagaa.com:

ಬಾಹ್ಯಾಕಾಶ ಕ್ಷೇತ್ರದಲ್ಲಿ ಮೇಲಿಂದ್ಮೇಲಿಗೆ ಯಶಸ್ಸು ಕಾಣ್ತಿರೋ ಇಸ್ರೋಗೆ ಇದೀಗ ಮತ್ತೊಂದು ಯಶಸ್ಸು ಸಿಕ್ಕಿದೆ. ಹವಮಾನ ಉಪಗ್ರಹ INSAT-3DS ಸ್ಯಾಟಲೈಟನ್ನ GSLV F14 ರಾಕೆಟ್‌ ಮೂಲಕ ಫೆಬ್ರುವರಿ 17ರಂದು ಇಸ್ರೋ ಯಶಸ್ವಿಯಾಗಿ ಲಾಂಚ್‌ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರೋ ಸತಿಶ್‌ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಈ ಉಪಗ್ರಹವನ್ನ ಲಾಂಚ್‌ ಮಾಡಲಾಗಿದೆ. ಅಂದ್ಹಾಗೆ ಇದು ಮೂರನೇ ಜೆನರೇಷನ್‌ನ ಮೀಟೆರೋಲಾಜಿಕಲ್‌ ಅಥವಾ ಹವಾಮಾನ ಸಂಬಂಧಿತ ಉಪಗ್ರಹವಾಗಿದೆ. ಈ ಮಿಷನ್‌ ಮೂಲಕ ಸಮುದ್ರದ ಮೇಲ್ಮೈಯನ್ನ ಸರಿಯಾಗಿ ಸ್ಟಡಿ ಮಾಡಿ ಅತ್ಯಂತ ನಿಖರವಾದ ಹವಮಾನ ಮುನ್ಸೂಚನೆ ನೀಡೋಕೆ ಸಹಾಯವಾಗುತ್ತೆ. ಜೊತೆಗೆ ಮತ್ತಷ್ಟು ಎಫೆಕ್ಟಿವ್‌ ಆಗಿ ನೈಸರ್ಗಿಕ ವಿಪತ್ತುಗಳನ್ನ ಪ್ರೆಡಿಕ್ಸ್‌ ಮಾಡೋಕು ಸಾಧ್ಯವಾಗುತ್ತೆ. ಇನ್ನು ಈ ಮಿಷನ್‌ನ ಸ್ವಾರಸ್ಯಕರವಾದ ವಿಷಯ ಅಂದ್ರೆ… ಈ ಸ್ಯಾಟೆಲೈಟ್‌ನ್ನ ಹೊತ್ತೊಯ್ಯೊ GSLV F14 ರಾಕೆಟ್‌ಗೆ ʻನಾಟಿ ಬಾಯ್‌ʼ (Naughty Boy) ಅಂತ ಹೆಸರಿಡಲಾಗಿದೆ. ಎಸ್‌… ಕೇಳೋಕೂ ಫನ್ನಿಯಾಗಿದೆ. ಆದ್ರೆ ಈ ತರ ಹೆಸರಿಡೋಕೂ ಕಾರಣವಿದೆ. ಈ ನಾಟಿ ಬಾಯ್‌ ʻGSLV F14ʼ ರಾಕೆಟ್‌ನ ಇದು 16ನೇ ಬಾಹ್ಯಾಕಾಶ ಮಿಷನ್‌. ಈ ರಾಕೆಟ್‌ ಈ ಹಿಂದೆ ಕೈಗೊಂಡ ಹಲವು ಮಿಷನ್‌ಗಳಲ್ಲಿ ಒಂದೊಂದ್‌ ರೀತಿಯ ಎಡವಟ್ಟು ಮಾಡ್ಕೊಂಡಿತ್ತು. ಈ ರಾಕೆಟ್‌ ಒಟ್ಟು 40% ಫೇಲ್ಯುರ್‌ ರೇಟ್‌ ಹೊಂದಿದೆ. ತನ್ನ 15 ಮಿಷನ್‌ಗಳ ಪೈಕಿ 6ರಲ್ಲಿ ಸಮಸ್ಯೆಗಳನ್ನ ಅನುಭವಿಸಿತ್ತು. ಇದ್ರಲ್ಲಿ ಸಾಕಷ್ಟು ಬಾರಿ ಡೆಲಿವರಿ ಸಮಸ್ಯೆಗಳು ಕೂಡ ಉಂಟಾಗಿದ್ವು. ಸೋ, ಈ ರೀತಿ ತನ್ನ ಹಿಂದಿನ ಮಿಷನ್‌ಗಳಲ್ಲಿ ಏನಾದರೊಂದು ಎಡವಟ್ಟು ಮಾಡ್ಕೊಂಡು ಸವಾಲುಗಳನ್ನ ಎದುರಿಸೋ ಈ ರಾಕೆಟ್‌ಗೆ ʻನಾಟಿ ಬಾಯ್‌ʼ ಅಂತ ಹೆಸರಿಸಲಾಗಿದೆ. ಒಂಥರಾ… ಪೆಟ್‌ ನೇಮ್‌ ಇದ್ದ ಹಾಗೇ.

-masthmagaa.com

Contact Us for Advertisement

Leave a Reply