ಭೂಮಿಗೆ ಬಂದ “ಚಂದ್ರಯಾನ-3ರ ಪ್ರೊಪಲ್ಷನ್‌ ಮಾಡ್ಯುಲ್”!

masthmagaa.com:

ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಪ್ರೊಪಲ್ಶನ್‌ ಮಾಡ್ಯೂಲ್‌ (ನೋದನ ಘಟಕ)ವನ್ನ ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ತಂದಿಳಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಚಂದ್ರನತ್ತ ನೌಕೆಯನ್ನ ಉಡಾವಣೆ ಮಾಡಿ ಅದನ್ನ ಹಿಂತಿರುಗಿಸುವ ಭಾರತದ ಸಾಮರ್ಥ್ಯವನ್ನ ಇಸ್ರೋ ವಿಶ್ವ ಮಟ್ಟದಲ್ಲಿ ಪ್ರದರ್ಶಿಸಿದೆ. ಭಾರತೀಯ ವಿಜ್ಞಾನಿಗಳು ನಡೆಸಿದ ಈ ಅದ್ಬುತ ಪ್ರಯೋಗದಲ್ಲಿ ಚಂದ್ರಯಾನ 3ರ ಪ್ರೊಪಲ್ಶನ್‌ ಮಾಡ್ಯೂಲ್‌ನ್ನ ಯಶಸ್ವಿಯಾಗಿ ಚಂದ್ರನ ಕಕ್ಷೆಯಿಂದ ಭೂಮಿಗೆ ಹಿಂದಿರುಗಿಸಲಾಗಿದೆ. ಆರ್ಬಿಟ್‌ ರೈಸಿಂಗ್‌ ಮನೋವರ್‌ ಮತ್ತು ಟ್ರಾನ್ಸ್‌ ಅರ್ಥ್‌ ಇಂಜೆಕ್ಷನ್‌ ಮನೂವರ್‌ಗಳು ಪ್ರೊಪಲ್ಶನ್‌ ಮಾಡ್ಯೂಲ್‌ನ್ನ ಭೂಮಿಗೆ ತಂದು ಇಳಿಸುವಲ್ಲಿ ಯಶಸ್ವಿಯಾಗಿವೆ ಅಂತ ಇಸ್ರೋ Xನಲ್ಲಿ ಹೇಳ್ಕೊಂಡಿದೆ. ಅಂದ್ಹಾಗೆ ಜುಲೈ 14ರಂದು ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ “LVM3 ಮಾರ್ಕ್-4 ರಾಕೆಟ್‌”ನ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆಗಸ್ಟ್‌ 17ರಂದು ಪ್ರೊಪಲ್ಶನ್‌ ಮಾಡ್ಯೂಲ್‌ನಿಂದ ವಿಕ್ರಮ್‌ ಯಶಸ್ವಿಯಾಗಿ ಬೇರ್ಪಟ್ಟಿತ್ತು. ಆಗಸ್ಟ್23‌ ರಂದು ಚಂದಿರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ʻವಿಕ್ರಮ್‌ʼ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿ ಇತಿಹಾಸ ಸೃಷ್ಟಿಸಿತ್ತು.

-masthmagaa.com

Contact Us for Advertisement

Leave a Reply