ಚಂದ್ರಯಾನ-3: ಕಕ್ಷೆ ಬದಲಿಸಿದ ಬಾಹ್ಯಾಕಾಶ ನೌಕೆ

masthmagaa.com:

ಚಂದ್ರನ ಅಂಗಳಕ್ಕೆ ಇಳಿಯುವ ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ-3ರ ಬಾಹ್ಯಾಕಾಶ ನೌಕೆ, ಉಡಾವಣೆಯ ಮರುದಿನ ತನ್ನ ಮೊದಲ orbit-raising manoeuvre ಪೂರ್ಣಗೊಳಿಸಿದೆ. ಇಲ್ಲಿ ಆರ್ಬಿಟ್‌ ರೈಸಿಂಗ್‌ ಮ್ಯಾನುವರ್‌ ಅಂದ್ರೆ ಪಥ ಬದಲಿಸೋದು ಅಂತ ಅರ್ಥ. ಈಗ ಬಾಹ್ಯಾಕಾಶ ನೌಕೆ ಚಂದ್ರನತ್ತ ಹೋಗ್ಬೇಕಂದ್ರೆ ಭೂಮಿಯ ಗುರುತ್ವಾಕರ್ಷಣ ಬಲವನ್ನ ಮೀರಿದ ಬಲವನ್ನ ಪಡೀಬೇಕು. ಇದನ್ನ ಎಸ್ಕೇಪ್‌ ವೆಲಾಸಿಟಿ ಅಂತ ಹೇಳ್ತೀವಿ. ಸೋ ಈ ಎಸ್ಕೇಪ್‌ ವೆಲಾಸಿಟಿ ವೇಗ ಸಿಗೋವರೆಗು ನೌಕೆ ಭೂಮಿಯ ಸುತ್ತ ಸುತ್ತುತಾ ಇರುತ್ತೆ. ಆದ್ರೆ ಪ್ರತಿ ಸುತ್ತಿನ ನಂತರವೂ ಕಕ್ಷೆಯನ್ನ ಬದಲಸಿ ಭೂಮಿಯಿಂದ ಇನ್ನಷ್ಟು ದೂರವಾಗ್ತಾ ಇನ್ನಷ್ಟು ವೇಗ ಪಡೆಯುತ್ತಾ ಹೋಗುತ್ತೆ. ಸೋ ಈಗ ಆ ರೀತಿ ಒಂದು ಸುತ್ತು ಹಾಕಿ ಎರಡನೇ ಸುತ್ತಿಗೆ ಕಕ್ಷೆ ಬದಲಿಸಲಾಗಿದೆ ಅಂತ ಇಸ್ರೋ ಹೇಳಿದೆ. ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್​ ಮತ್ತು ಕಮಾಂಡ್​ ನೆಟ್​ವರ್ಕ್ ಸೆಂಟರ್​ನಿಂದ ಈ ಮೊದಲ ಹಂತದ ಆರ್ಬಿಟ್‌ ರೈಸಿಂಗ್‌ ಪ್ರಕ್ರಿಯೆಯನ್ನ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ. ಸದ್ಯ ಬಾಹ್ಯಾಕಾಶ ನೌಕೆಯ ಸ್ಥಿತಿ ಉತ್ತಮವಾಗಿದೆ ಅಂತ ಇಸ್ರೋ ತಿಳಿಸಿದೆ. ಸದ್ಯ ಚಂದ್ರಯಾನ-3ರ ನೌಕೆ 41,762ಕಿ.ಮೀ ✖ 173ಕಿ.ಮೀ ಆರ್ಬಿಟ್‌ನಲ್ಲಿದೆ, ಅಂದ್ರೆ ಭೂಮಿಗೆ ಹತ್ರ ಇದ್ದಾಗ 173ಕಿ.ಮೀ ಮತ್ತು ದೂರ ಇದ್ದಾಗ 41,762ಕಿ.ಮೀ ಡಿಸ್ಟನ್ಸ್‌ನಲ್ಲಿರೋ ಕಕ್ಷೆಯಲ್ಲಿದೆ. ಈ ರೀತಿ ಸುಮಾರು 4-5 ಬಾರಿ ಭೂಮಿ ಸುತ್ತ ಸುತ್ತಬೇಕಾಗುತ್ತೆ.

-masthmagaa.com

Contact Us for Advertisement

Leave a Reply