“ಅಮ್ಮ ಇಲ್ಲದೇ ಇರೋದು ಬೇಜಾರು” : ಶಿವಣ್ಣ

masthmagaa.com:

ಶಿವಣ್ಣ ಅಭಿನಯದ ಘೋಸ್ಟ್‌ ಮೂವಿ ಪ್ರಮೋಷನ್‌ ಶುರುವಾಗಿದೆ. ಮೂವಿ ಪ್ರಮೋಷನಲ್‌ನಲ್ಲಿ ಬ್ಯುಸಿ ಇರುವ ಶಿವಣ್ಣ ಹಾಗೂ ಚಿತ್ರತಂಡ ಮೊನ್ನೆ ಅಷ್ಟೇ ಮುಂಬೈಗೂ ಹೋಗಿ ಬಂದಿದ್ರು. ಅಲ್ಲೂ ಕೂಡ ಘೋಸ್ಟ್‌ ಮೂವಿ ಪ್ರಮೋಷನ್‌ ಜೋರಾಗೆ ನಡೆದಿತ್ತು. ಇದೀಗ ಬೆಂಗಳೂರಿನಲ್ಲಿ ನಡೆದ ಪ್ರಮೋಷನ್‌ ವೇಳೆ ಶಿವಣ್ಣ ತಮ್ಮ ತಾಯಿ ಪಾರ್ವತಮ್ಮ ರಾಜ್‌ಕುಮಾರ್‌ ಅವರನ್ನ ನೆನಪಿಸಿಕೊಂಡಿದ್ದಾರೆ.

” ಸಿನಿಮಾದಲ್ಲಿ ಪ್ರತಿಯೊಬ್ಬರು ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ದೊಡ್ಡ ತಾರಬಳಗ ಇದೆ, ಅವರವರ ಕ್ಯಾರೆಕ್ಟ್​ಗೆ ತಕ್ಕಂಗೆ ನಟಿಸಿದ್ದಾರೆ. ಈ ಸಿನಿಮಾ‌ ಯಾರಿಗೂ ನಿರಾಸೆ ಮಾಡಲ್ಲ. ಹೋದಕಡೆಯೆಲ್ಲ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿದ್ದು ಹಾಗೇ ಅಭಿಮಾನಿಗಳ ಪ್ರೀತಿ ಜೊತೆಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೇ ನಮ್ಮ ಸಿನಿಮಾ ಜೊತೆ ಬೇರೆ ಸಿನಿಮಾಗಳು ರಿಲೀಸ್ ಆಗಲಿದೆ, ಅವುಗಳಿಗೂ ಆಲ್​ ದೀ ಬೆಸ್ಟ್​. ಆದ್ರೆ ಫ್ಯಾನ್ಸ್​ ನಮ್ಮ ಸಿನಿಮಾವನ್ನ ಸ್ಬಲ್ಪ ಜಾಸ್ತಿ ನೋಡಲಿ. ಸಿನಿಮಾದಲ್ಲಿ ಹಳೆಯ ಲುಕ್ ನೋಡಿ ಖುಷಿ ಆಯ್ತು. ಆದರೆ ಅದನ್ನು ನೋಡೋಕೆ ಅಮ್ಮ ಇಲ್ಲದೇ ಇರೋದು ಬೇಜಾರು” ಅಂತ ಶಿವಣ್ಣ ಭಾವುಕರಾದರು.

-masthmagaa.com

Contact Us for Advertisement

Leave a Reply