‘ಮಾಲಿನ್ಯ ನಿಲ್ಲಿಸೋದು ನಿಮ್ಮ ಕೆಲಸ’: ಪಂಜಾಬ್‌ಗೆ ಸುಪ್ರೀಂ ಕೋರ್ಟ್‌ ಆದೇಶ!

masthmagaa.com:

ಜನರ ಆರೋಗ್ಯಕ್ಕೆ ಕುತ್ತಾಗೋ ಮಟ್ಟಿಗೆ ಇದೀಗ ದೆಹಲಿಯ ವಾಯು ಮಾಲಿನ್ಯ ತೀವ್ರಗೊಂಡಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಸುಪ್ರೀಂ ಕೋರ್ಟ್‌, ಪಂಜಾಬ್‌ ಸರ್ಕಾರ ಮಾಲಿನ್ಯವನ್ನ ನಿಲ್ಲಿಸಬೇಕು, ಇದು ನಿಮ್ಮ ಕೆಲಸ, ಅಂತ ಆದೇಶಿಸಿದೆ. ʻಪಂಜಾಬ್‌ ಮತ್ತು ಹರಿಯಾಣದಲ್ಲಿ ʻಸ್ಟಬಲ್‌ ಬರ್ನಿಂಗ್‌ʼನಿಂದ ಅಂದ್ರೆ ಕೃಷಿ ತ್ಯಾಜ್ಯ ಅಥವಾ ಕಳೆಗಳನ್ನ ಸುಟ್ಟು ಹಾಕೋದ್ರಿಂದ, ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗೋದಕ್ಕೆ ಪ್ರಮುಖ ಕಾರಣವಾಗಿದೆ. ಆದ್ರಿಂದ ಸ್ಟಬಲ್‌ ಬರ್ನಿಂಗ್‌ ತಡೆಯೋ ಬಗ್ಗೆ ಪಂಜಾಬ್‌ ಸರ್ಕಾರ ಕ್ರಮಗಳನ್ನ ತೆಗೆದುಕೊಳ್ಳಬೇಕು. ಇದನ್ನ ನೀವು ನಿಲ್ಲಿಸಲೇಬೇಕು. ಹೇಗಿದನ್ನ ನಿಲ್ಲಿಸ್ತೀರೋ ಗೊತ್ತಿಲ್ಲ. ಆದ್ರೆ ಇದು ನಿಮ್ಮ ಕೆಲಸ. ಹೇಗಾದ್ರೂ ಇದನ್ನ ಈ ಕೂಡಲೇ ನಿಲ್ಲಿಸಬೇಕು. ಈ ಬಗ್ಗೆ ದೆಹಲಿ ಸರ್ಕಾರ ಕೂಡ ಜವಾಬ್ದಾರಿಯನ್ನ ವಹಿಸಬೇಕು ಅಂತ ಆದೇಶಿಸಿದೆ. ನ್ಯಾಯಾಧೀಶರಾದ ಎಸ್‌. ಕೆ. ಕೌಲ್‌ ಮತ್ತು ಸುಧಾಂಶು ಧುಲಿಯಾ ಅವ್ರ ನೇತೃತ್ವದ ಪೀಠ ಈ ವಿಚಾರಣೆಯನ್ನ ಶುಕ್ರವಾರ ಅಂದ್ರೆ ನವೆಂಬರ್‌ 10ಕ್ಕೆ ಮುಂದೂಡಿದೆ. ಇದ್ರೊಂದಿಗೆ ದೆಹಲಿ, ಉತ್ತರ ಪ್ರದೇಶ, ಪಂಜಾಬ್‌, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಸ್ಟಬಲ್‌ ಬರ್ನಿಂಗ್‌ ನಿಲ್ಲಿಸೋ ಬಗ್ಗೆ ಮೀಟಿಂಗ್‌ ಆಯೋಜಿಸಬೇಕು ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply