ಮಾರ್ಕ್‌-ಮಸ್ಕ್‌ ಕುಸ್ತಿಗೆ ಲೊಕೇಶನ್‌ ಫಿಕ್ಸ್‌!

masthmagaa.com:

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಹಾಗೂ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರ ನಡುವಿನ ಕುಸ್ತಿ ಪಂದ್ಯಕ್ಕೆ ಸಂಬಂಧಿಸಿದಂತೆ ಮಸ್ಕ್‌ ಹೊಸ ಅಪ್‌ಡೇಟ್‌ ಕೊಟ್ಟಿದ್ದಾರೆ. ಈ ಕುಸ್ತಿ ಪಂದ್ಯವನ್ನ ನನ್ನ ಹಾಗೂ ಮಾರ್ಕ್‌ರ ಫೌಂಡೇಶನ್‌ಗಳು ಮ್ಯಾನೇಜ್‌ ಮಾಡಲಿವೆ. ಇದರ ನೇರಪ್ರಸಾರ X ಹಾಗೂ ಮೆಟಾದಲ್ಲಿ ನಡೆಯಲಿದ್ದು, ಕುಸ್ತಿಪಂದ್ಯ ಇಟಲಿಯ ರೋಮ್‌ನಲ್ಲಿ ನಡೆಯಲಿದೆ. ಈ ಲೊಕೇಶನ್‌ ಬಗ್ಗೆ ನಾನು ಈಗಾಗಲೇ ಇಟಲಿಯ ಪ್ರಧಾನಿ ಹಾಗೂ ಕಲ್ಚರ್‌ ಮಿನಿಸ್ಟರ್‌ ಬಳಿ ಮಾತಾಡಿದ್ದು, ಅವರು ಇದಕ್ಕೆ ಒಪ್ಪಿಕೊಂಡಿದ್ದಾರೆ ಅಂತ ಮಸ್ಕ್‌ ಹೇಳಿದ್ದಾರೆ. ಇತ್ತ ಈ ಕುರಿತು ಪ್ರತಿಕ್ರಿಯಿಸಿರುವ ಜುಕರ್‌ಬರ್ಗ್‌, ನಾನು ಈ ಕ್ರೀಡೆಯನ್ನ ತುಂಬಾ ಪ್ರೀತಿಸ್ತೀನಿ ಹಾಗೂ ಮಸ್ಕ್‌ ಚಾಲೆಂಜ್‌ ಹಾಕಿದ ದಿನದಿಂದಲೇ ನಾನು ಫೈಟ್‌ ಮಾಡೋಕೆ ರೆಡಿ ಇದೀನಿ. ಆದ್ರೆ ನಾನು ಹೇಳಿದ ದಿನಾಂಕದಲ್ಲಿ ಮಸ್ಕ್‌ ಕುಸ್ತಿಗೆ ರೆಡಿಯಿದ್ರೆ ಮಾತ್ರ. ಅಲ್ಲಿಯವರೆಗೂ ಮಸ್ಕ್‌ ಏನೇ ಹೇಳಿದ್ರೂ ಅದಕ್ಕೆ ನನಗೆ ಒಪ್ಪಿಗೆಯಿಲ್ಲ ಅಂತ ತಮ್ಮ ಸೋಷಿಯಲ್‌ ಮೀಡಿಯಾ ಥ್ರೆಡ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೆ ಆಗಸ್ಟ್‌ 26ರಂದು ಕುಸ್ತಿಗೆ ರೆಡಿ ಅಂತ ಜುಕರ್‌ಬರ್ಗ್‌ ಹೇಳಿದ್ದರು. ಆದ್ರೆ ಈ ದಿನಾಂಕದ ಬಗ್ಗೆ ಮಸ್ಕ್‌ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಈ ಇಬ್ಬರು ಬಿಲಿಯನೇರ್‌ಗಳು ಸುಮ್ಮನೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ಜನರನ್ನ ಫೂಲ್‌ ಮಾಡ್ತಿದಾರೋ ಅಥ್ವಾ ನಿಜವಾಗ್ಲೂ ಕುಸ್ತಿ ಮಾಡ್ತಾರೋ ಕಾದು ನೋಡಬೇಕು. ಇನ್ನು ಕಳೆದ ವರ್ಷ ಕೂಡ ಯುಕ್ರೇನ್‌ ಮೇಲೆ ಯುದ್ಧ ಪ್ರಾರಂಭಿಸಿದ ಟೈಮ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನ ಯುಕ್ರೇನ್‌ನಲ್ಲಿನ ಯುದ್ಧ ಬಿಟ್ಟು ನನ್ನ ಬಳಿ ಫೈಟ್‌ ಮಾಡಿ ಬನ್ನಿ ಅಂತ ಮಸ್ಕ್‌ ಕರೆದಿದ್ರು. ಜೊತೆಗೆ ಈ ಕುಸ್ತಿಯಲ್ಲಿ ಗೆದ್ದೋರು ಯುಕ್ರೇನ್‌ ಯುದ್ಧದ ಭವಿಷ್ಯವನ್ನ ನಿರ್ಧರಿಸುತ್ತಾರೆ ಅಂತ ಮಸ್ಕ್‌ ಚಾಲೆಂಜ್‌ ಮಾಡಿದ್ರು.

-masthmagaa.com

Contact Us for Advertisement

Leave a Reply