ಜೈಲರ್‌ ಮೂವಿ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌ !

masthmagaa.com:

ಜೈಲರ್‌ ಮೂವಿ ಸದ್ಯ ತೆರೆಕಂಡು ಹಿಟ್‌ ಆದ ಅದ್ಬುತವಾದಂತ ಮೂವಿ. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್‌ ಕೂಡ ಪಡೆದುಕೊಂಡಿದೆ. ಶಿವಣ್ಣ ಅವರ ಜೈಲರ್‌ ಮೂವಿನ ನಟನೆಗೆ ತಮಿಳು ಫ್ಯಾನ್ಸ್‌ ಫಿದಾ ಆಗಿದ್ದಾರೆ ತಮಿಳಿನಲ್ಲೇ ಮುಂದಿನ ಮೂವಿಗಳನ್ನ ಮಾಡಿ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಅಷ್ಟು ದೊಡ್ಡ ಸೌಂಡ್‌ ಮಾಡಿದೆ ಜೈಲರ್‌ ಮೂವಿ. ರಜನಿಕಾಂತ್‌ ಅವರ ಹಿಟ್‌ ಲಿಸ್ಟ್‌ನಲ್ಲಿ ಜೈಲರ್‌ ಮೂವಿ ಕೂಡ ಸೇರಿಕೊಂಡಿದೆ. ಇದೀಗ ಜೈಲರ್‌ ಮೂವಿ ಒಟಿಟಿಯಲ್ಲಿ ಬರೋಕೆ ಸಜ್ಜಾಗಿದೆ.

ಸನ್ ಪಿಕ್ಚರ್ಸ್’ ‘ಜೈಲರ್’ ಸಿನಿಮಾ ನಿರ್ಮಾಣ ಮಾಡಿದ ಜೈಲರ್‌ ಮೂವಿ ಆಗಸ್ಟ್‌ 10ಕ್ಕೆ ರಿಲೀಸ್‌ ಆಗಿತ್ತು. 72ರ ವಯಸ್ಸಿನಲ್ಲೂ ಅದ್ಭುತವಾಗಿ ನಟಿಸಿದ ರಜನಿಕಾಂತ್‌ ಅವರ ಜೈಲರ್‌ ಮೂವಿ ಇದೀಗ ಸಪ್ಟೆಂಬರ್‌ 7ಕ್ಕೆ ಅಮೇಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗಲಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೈಲರ್‌ ಮೂವಿಯನ್ನ ನೋಡಬಹುದು.

-masthmagaa.com

Contact Us for Advertisement

Leave a Reply