ASEAN ಪ್ರಾದೇಶಿಕ ಸಮಾವೇಶ: ಸಿಂಗಾಪುರ ಫಾರಿನ್‌ ಮಿನಿಸ್ಟರ್‌ ಜೊತೆ ಎಸ್‌ ಜೈಶಂಕರ್‌ ಮಾತುಕತೆ

masthmagaa.com:

ಸಿಂಗಾಪುರದಲ್ಲಿ ನಡೆದ ಅಂದ್ರೆ ಅಸೋಸಿಯೇಷನ್‌ ಆಫ್‌ ಸೌತ್‌ ಈಸ್ಟ್‌ ಏಷ್ಯನ್‌ ನೇಷನ್ಸ್‌(ASEAN) ಮತ್ತು ಈಸ್ಟ್‌ ಏಷಿಯನ್‌ ರಾಯಭಾರಿಗಳ ಪ್ರಾದೇಶಿಕ ಸಮಾವೇಶದಲ್ಲಿ ವಿದೇಶಾಂಗ ಸಚಿವರಾದ ಎಸ್‌ ಜೈಶಂಕರ್‌ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸಿಂಗಾಪುರ ವ್ಯಾಪಾರ ಮತ್ತು ಕೈಗಾರಿಕಾ ಸಚಿವರಾದ ಗಾನ್‌ ಕಿಮ್‌ ಯೋಂಗ್‌ ಅವರೊಂದಿಗೆ ಮಾತುಕತೆಯನ್ನ ನಡೆಸಿದ್ದಾರೆ. ಈ ಕುರಿತು ತಮ್ಮ `X’ ಖಾತೆಯಲ್ಲಿ ಪೋಸ್ಟ್‌ ಮಾಡಿದ ಜೈಶಂಕರ್‌, ಗಾನ್‌ ಕಿಮ್‌ ಯೋಂಗ್‌ ಅವರನ್ನ ಮೀಟ್‌ ಮಾಡಿ ಬಹಳ ಸಂತೋಷವಾಗಿದೆ. ದೀರ್ಘಕಾಲ ಪರಿಣಾಮಕಾರಿ ಹಾಗೂ ಉಭಯ ದೇಶಗಳಿಗೆ ಸಹಕಾರಿಯಾಗುವ ಹೊಸ ಕ್ಷೇತ್ರಗಳನ್ನ ಎಕ್ಸ್‌ಪ್ಲೋರ್‌ ಮಾಡುವ ವಿಚಾರವಾಗಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಯೋಜನೆಗಳನ್ನ ISMR ಸಭೆಯಲ್ಲಿ ಡೆವೆಲಪ್‌ ಮಾಡಲಾಗುತ್ತೆ ಅಂತ ಸಚಿವ ಎಸ್‌ ಜೈಶಂಕರ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply