ಭಾರತೀಯ ಮಿಷನ್‌ಗೆ ಅಡ್ಡಿ ಮಾಡಿದವರಿಗೆ ಜೈಶಂಕರ್‌ ಖಡಕ್‌ ಎಚ್ಚರಿಕೆ!

masthmagaa.com:

ವಿದೇಶಗಳಲ್ಲಿ ಭಾರತದ ಕಾರ್ಯಚರಣೆಗೆ ಅಡ್ಡಿ ಮಾಡ್ತಿರೋರನ್ನ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತರಾಟೆಗೆ ತಗೊಂಡಿದ್ದಾರೆ. ಕಳೆದ ವರ್ಷ, ಲಂಡನ್‌ನಲ್ಲಿರೋ ಭಾರತದ ಹೈ ಕಮಿಷನ್‌ ಕಚೇರಿ, ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರೋ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. ಜೊತೆಗೆ ಕೆನಡಾದಲ್ಲಿ ಭಾರತೀಯ ರಾಯಭಾರಿಗಳಿಗೆ ಬೆದರಿಕೆ ಹಾಕ್ತಿರೋರನ್ನ ಸುಮ್ಮನೆ ಬಿಡಬಾರ್ದು ಅಂತ ಕೆನಡಾ ಸರ್ಕಾರಕ್ಕೂ ಆಗ್ರಹ ಮಾಡಿದ್ದಾರೆ. ʻದಾಳಿ ನಡೆದಿರೋ ರಾಷ್ಟ್ರಗಳೇ ಈ ಬಗ್ಗೆ ಸರಿಯಾಗಿ ತನಿಖೆ ನಡೆಸದೇ ಕ್ರಮ ತೆಗೆದ್ಕೊಳ್ತಿಲ್ಲ ಅಂದ್ರೆ ಇಂಡೈರೆಕ್ಟಾಗಿ ಆ ರಾಷ್ಟ್ರಗಳು ಒಂದು ರೀತಿಯ ಸಂದೇಶವನ್ನ ರವಾನಿಸ್ತಿವೆ. ಅಂತಹ ಸಂದೇಶಗಳು ಅವ್ರಿಗೂ ಒಳ್ಳೇದಲ್ಲ… ಇತರೆ ದೇಶಗಳಿಗೂ ಒಳ್ಳೇದಲ್ಲʼ ಅಂದಿದ್ದಾರೆ. ಅಲ್ದೆ ʻಕೆನಡಾದಲ್ಲಿ ಭಾರತೀಯ ರಾಯಭಾರಿಗಳ ಮೇಲೆ ಪದೇ ಪದೇ ಅನೇಕ ರೀತಿಯಲ್ಲಿ ಬೆದರಿಕೆ ಬರ್ತಿರೋದ್ರಿಂದ ನಾವು ಈ ಹಿಂದೆ ಕೆನಡಾದಲ್ಲಿ ವೀಸಾ ವಿತರಣೆಯನ್ನ ಸ್ಥಗಿತಗೊಳಿಸಿದ್ವಿ. ಆ ಸಮಯದಲ್ಲಿ ನಮ್ಮ ರಾಯಭಾರಿಗಳಿಗೆ ಕೆನಡಾದಲ್ಲಿ ಸೇಫ್ಟಿನೇ ಇಲ್ಲವಾಗಿತ್ತು. ಅಂತಹ ರಿಸ್ಕ್‌ಗೆ ರಾಯಭಾರಿಗಳನ್ನ ನೂಕೋಕೆ ನಮಗೆ ಇಷ್ಟವಿರ್ಲಿಲ್ಲ. ಸೋ ವೀಸಾ ಸ್ಥಗಿತಗೊಳಿಸಿದ್ವಿ. ಆದ್ರೆ ಈಗ ಎಲ್ಲಾ ಸರಿಯಾಗಿದೆ. ಹಾಗಾಗಿ ವೀಸಾ ಕೂಡ ಸರಿಯಾಗಿ ಕಾರ್ಯಚರಿಸ್ತಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply