ಭಾರತ್‌ ಜೋಡೊ ಯಾತ್ರೆಯ ಸಮಯದಲ್ಲಿಯೇ ಕಾಂಗ್ರೆಸ್‌ ಸಂಸದ ಸಂತೋಷ್‌ ಸಿಂಗ್‌ ನಿಧನ!

masthmagaa.com:

ಪಂಜಾಬ್‌ನಲ್ಲಿ ಸಾಗ್ತಿರೋ ರಾಹುಲ್‌ ಗಾಂಧಿಯವರ ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹೊತ್ತಲ್ಲೇ ಕಾಂಗ್ರೆಸ್‌ ಸಂಸದ ಸಂತೋಷ್‌ ಸಿಂಗ್‌ ಚೌಧರಿ ನಿಧನರಾಗಿದ್ದಾರೆ. ಜಲಂಧರ್‌ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಸಿಂಗ್‌ ಪಂಜಾಬ್‌ನ ಲೂದಿಯಾನದಲ್ಲಿ ನಡೆಯುತ್ತಿದ್ದ ಯಾತ್ರೆಯಲ್ಲಿ ಭಾಗಿಯಾಗಿದ್ರು. ಪ್ರಾಥಮಿಕ ವರದಿಯ ಪ್ರಕಾರ ಚೌಧರಿ ಅವ್ರಿಗೆ ಹೃದಯಾಘಾತವಾಗಿತ್ತು, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಪ್ರಯೋಜನವಾಗಿಲ್ಲ ಅಂತ ತಿಳಿದು ಬಂದಿದೆ. ಇನ್ನು ಮೃತ ಸಂಸದರು ರಾಹುಲ್‌ ಅವ್ರ ಜೊತೆ ಕುಶ್ತ್‌ ಆಶ್ರಮದಿಂದ ಹೊರ ಬಂದಾಗ ಕುಸಿದು ಬಿದ್ದಿದ್ದರು ಅಂತ ತಿಳಿದು ಬಂದಿದೆ. ಯಾತ್ರೆಯನ್ನ ಸ್ಥಗಿತಗೊಳಿಸಿದ ರಾಹುಲ್‌ ಹಾಗೂ ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ಚೌಧರಿ ಅವ್ರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply