ಜಮ್ಮು & ಕಾಶ್ಮೀರ: ನಾಲ್ಕು ಉಗ್ರರನ್ನ ಹೊಡೆದುಳಿಸಿದ ಭದ್ರತಾ ಪಡೆ!

masthmagaa.com:

ಜಮ್ಮು & ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ಮಾಡಿವೆ. ನಾಲ್ಕು ಮೋಸ್ಟ್‌ ವಾಂಟೆಡ್‌ ಉಗ್ರರನ್ನ ಹೊಡೆದುರುಳಿಸಲಾಗಿದೆ. ಆಪರೇಶನ್‌ನಲ್ಲಿ ಲಷ್ಕರ್‌ ಸಂಘಟನೆ ಬೆಂಬಲಿತ ರೆಸಿಸ್ಟೆನ್ಸ್‌ ಫ್ರಂಟ್‌ನ (TRF)ನ ಪ್ರಮುಖ ಆಪರೇಟರ್‌, ದಿ ಮೋಸ್ಟ್‌ ವಾಂಟೆಡ್‌, ಬಸಿತ್‌ ದಾರ್‌ ಕೂಡ ನೆಲಕಚ್ಚಿದ್ದಾನೆ. ಅಂದ್ಹಾಗೆ ಕುಲ್ಗಾಮ್‌ ಜಿಲ್ಲೆಯಲ್ಲಿ ಉಗ್ರರಿರೋ ಬಗ್ಗೆ ಸುಳಿವು ಸಿಕ್ಕಿತ್ತು. ಇದರ ಬೆನ್ನಲ್ಲೇ, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮಾಡಿ ಉಗ್ರರನ್ನ ಫಿನಿಷ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply