ಜಮ್ಮು-ಕಾಶ್ಮೀರ: ಎನ್ಕೌಂಟರ್‌ನಲ್ಲಿ ಓರ್ವ ಉಗ್ರನ ಹತ್ಯೆ!

masthmagaa.com:

ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಸೇನೆ ಎನ್ಕೌಂಟರ್‌ ನಡೆಸಿದೆ. ಜೈಷ್‌ ಉಗ್ರ ಸಂಘಟನೆಯ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಶೋಪಿಯಾನ್‌ನ ಕಾಪ್ರೆನ್‌ ಅನ್ನೋ ಪ್ರದೇಶದಲ್ಲಿ ಉಗ್ರರು ಅಡಗಿರೋ ಕುರಿತ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಜಮ್ಮು ಪೋಲಿಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅಡಗಿ ಕೂತಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ಮಾಡಿದ್ದಾರೆ. ನಂತ್ರ ಸ್ಥಳವನ್ನು ಸುತ್ತುವರೆದ ಸೇನೆ ಎನ್ಕೌಂಟರ್‌ ಮಾಡಿ ಓರ್ವ ಉಗ್ರನನ್ನು ಹೊಡೆದುರುಳಿಸಿದೆ. ಹತ್ಯೆಯಾದ ಉಗ್ರನನ್ನು ಕಮ್ರನ್‌ ಬಾಯ್‌ ಅಲಿಯಾಸ್‌ ಹನೀಸ್‌ ಅಂತ ಗುರ್ತಿಸಲಾಗಿದೆ. ಇನ್ನು ಅದೇ ಸ್ಥಳದಲ್ಲಿ ಮತ್ತಷ್ಟು ಉಗ್ರರು ಇರೋ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಅಂತ ಪೊಲೀಸರು ಹೇಳಿದಾರೆ.

-masthmagaa.com

Contact Us for Advertisement

Leave a Reply