ಜಮ್ಮು & ಕಾಶ್ಮೀರ: ಪೂಂಚ್‌ ಜಿಲ್ಲೆಯಲ್ಲಿ ಮುಂದುವರೆದ ಉಗ್ರರ ದಾಳಿ!

masthmagaa.com:

ಜಮ್ಮು & ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಮೂರು ವಾರಗಳ ಹಿಂದೆ ನಡೆದಿದ್ದ ಉಗ್ರ ದಾಳಿಯ ಗಾಯ ಮಾಸೋ ಮುಂಚೇನೇ ಇದೀಗ ಮತ್ತೊಂದು ದಾಳಿ ನಡೆದಿದೆ. ಪೂಂಚ್‌ ಜಿಲ್ಲೆಯ ಕೃಷ್ಣ ಘಾಟಿ ಪ್ರದೇಶದಲ್ಲಿ ಜನವರಿ 12 ರಂದು ಶಂಕಿತ ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 3-4 ಸುತ್ತು ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದು, ಸದ್ಯ ಯಾವ್ದೇ ರೀತಿ ಪ್ರಾಣ ಹಾನಿಯಾಗಿಲ್ಲ. ಇದೀಗ ಭದ್ರತಾ ಪಡೆಗಳು ಘಟನಾ ಸ್ಥಳವನ್ನ ಸುತ್ತುವರೆದಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply