ಜಪಾನ್‌ನಲ್ಲಿ ಜನಸಂಖ್ಯೆ ಕುಸಿತ, ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ!

masthmagaa.com:

ಜಪಾನ್‌ನಲ್ಲಿ ಜನಸಂಖ್ಯೆಯ ಕುಸಿತ ವಿಪರೀತ ಹೆಚ್ಚಾಗ್ತಿದ್ದು, ಇದು ಹಲವು ಸಮಸ್ಯೆಗಳನ್ನ ತಂದಿಡ್ತಾ ಇದೆ. ಇದೀಗ ಜನಸಂಖ್ಯೆ ಇಲ್ಲದೇ ಯುವಕರ ಕೊರತೆಯಿಂದ ಅಲ್ಲಿನ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ ಅಂತ ವರದಿಯಾಗಿದೆ. ಜಪಾನ್‌ನಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಿದ್ದು, ಯುವ ಸಮುದಾಯ ಕ್ಷೀಣಿಸುತ್ತಿದೆ. ಹೀಗಾಗಿ ಜಪಾನ್‌ನಲ್ಲಿ ಇತ್ತೀಚಿಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಒಂದು ಸಾವಿರ ಹಳ್ಳಿಗಳ 40% ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಅವರ ವಿರುದ್ದ ಸ್ಪರ್ಧೆ ಮಾಡೋಕೆ ಅಭ್ಯರ್ಥಿಗಳೇ ಇರಲಿಲ್ಲ ಅಂತ ತಿಳಿದುಬಂದಿದೆ. ಇನ್ನೊಂದ್ಕಡೆ ಈಗಾಗಲೇ ಜನನ ದರ ಕುಸಿತದಿಂದ ಕಂಗೆಟ್ಟಿರೊ ಜಪಾನ್‌ಗೆ ಅಲ್ಲಿನ ಅವಿವಾಹಿತ ಯುವಕರು ಮತ್ತೊಂದು ಶಾಕ್‌ ಕೊಟ್ಟಿದ್ದಾರೆ. ಮದುವೆಯಾಗದ 49% ಯುವ ಜನರು ಮುಂದೆ ತಾವೇನಾದ್ರೂ ಮದುವೆ ಆದ್ರೆ ಮಕ್ಕಳು ಮಾಡಿಕೊಳ್ಳೋದಿಲ್ಲ ಅಂತ ಹೇಳಿದ್ದಾರೆ ಅಂತ ಸಮೀಕ್ಷೆಯೊಂದು ಹೇಳಿದೆ. ಅಂದ್ಹಾಗೆ ಜನನ ದರ ಹೆಚ್ಚಿಸೋಕೆ ಶತಪ್ರಯತ್ನ ಮಾಡ್ತಿರುವ ಜಪಾನ್‌ ಸರ್ಕಾರ ಹಲವು ಯೋಜನೆಗಳನ್ನ ಅಲ್ಲಿ ಜಾರಿಗೆ ತರ್ತಿದೆ. ಜಪಾನ್‌ನಲ್ಲಿ ಜನನ ದರ ಕಡಿಮೆ ಅಗ್ತಾ ಹೋದ್ರೆ, ಇದು ಹೀಗೆ ಮುಂದುವರೆದರೆ ಒಂದಿನಾ ಜಪಾನ್‌ ದೇಶವೇ ಕಣ್ಮರೆಯಾಗಲಿದೆ ಅಂತ ಜಪಾನ್‌ ಅಧ್ಯಕ್ಷ ಫುಮಿಯೊ ಕಿಶಿದಾ ಅವ್ರ ಕಾರ್ಯದರ್ಶಿ ಇತ್ತೀಚಿಗೆ ತಾನೇ ಕಳವಳ ವ್ಯಕ್ತಪಡಿಸಿದ್ರು.

-masthmagaa.com

Contact Us for Advertisement

Leave a Reply