ಜಪಾನ್‌: ಆರೋಗ್ಯಕರ ಜೀವನಶೈಲಿಗೆ ʻಎಲೆಕ್ಟ್ರಿಕ್‌ ಸಾಲ್ಟ್‌ ಸ್ಪೂನ್‌ʼ ಲಾಂಚ್‌

masthmagaa.com:

ಆರೋಗ್ಯಕರ ಜೀವನಶೈಲಿಗಾಗಿ ಡಾಯಟ್‌… ಫಿಟ್‌ನೆಸ್‌ ಅಂತಿರೋ ಈಗಿನ ಜಗತ್ತಲ್ಲಿ ಜಪಾನ್‌ ಈಗ ಹೊಸ ಮಾರ್ಗವನ್ನ ಕಂಡುಕೊಂಡಿದೆ. ಉತ್ತಮ ಆರೋಗ್ಯಕ್ಕಾಗಿ ʻಎಲೆಕ್ಟ್ರಿಕ್‌ ಸಾಲ್ಟ್‌ ಸ್ಪೂನ್‌ʼನ ಲಾಂಚ್‌ ಮಾಡಿದೆ. ಇದ್ರಿಂದ ಉಪಯೋಗ ಏನಂತ ಕೇಳಿದ್ರೆ, ಈ ಸ್ಪೂನ್‌ ಸಹಾಯದಿಂದ ಊಟ ಮಾಡಿದ್ರೆ… ಆ ಊಟದ ಟೇಸ್ಟ್‌ ಜಾಸ್ತಿಯಾಗುತ್ತೆ. ಈ ಸ್ಪೂನ್‌ನಲ್ಲಿ ಪಾಸ್‌ ಆಗೋ ವೀಕ್‌ ಎಲೆಕ್ಟ್ರಿಕ್‌ ಕರೆಂಟ್‌ಯಿಂದ ಆಹಾರದ ಉಪ್ಪು… ಖಾರ ಇನ್ನಷ್ಟು ಹೆಚ್ಚಾಗುತ್ತೆ. ಸೋ ನೀವು ಅತಿಯಾಗಿ ಉಪ್ಪು ಖಾರ ಸೇವಿಸಬೇಕಂತಿಲ್ಲ. ಹಿತಮಿತವಾಗಿ ಬಳಸಿ ಆರೋಗ್ಯಕರವಾಗಿರ್ಬೋದು ಅಂತ ಆ ಸ್ಪೂನ್‌ ತಯಾರಿಸಿರೋ ಸಂಸ್ಥೆ ಹೇಳಿದೆ. ಅತಿಯಾದ ಉಪ್ಪು ಸೇವನೆಯಿಂದ ಉಂಟಾಗೋ ತೀವ್ರ ರಕ್ತದೊತ್ತಡ, ಸ್ಟ್ರೋಕ್‌ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತೆ ಅಂತ ಹೇಳ್ಕೊಂಡಿದೆ. ಇದ್ರ ಮಾರಾಟ ಕೂಡ ಶುರುವಾಗಿದ್ದು, ಅಡ್ವಾನ್ಸ್ಡ್‌ ಟೆಕ್ನಾಲಜಿಗಳನ್ನ ಒಳಗೊಂಡಿರೋ ಈ ಎಲೆಕ್ಟ್ರಿಕ್‌ ಸ್ಪೂನ್‌ನ ರೇಟ್‌ ಸುಮಾರು 10,536 ರೂಪಾಯಿ ಅಂತ ಗೊತ್ತಾಗಿದೆ.

-masthmagaa.com:

Contact Us for Advertisement

Leave a Reply