ಜಪಾನ್: ಶಿಂಜೋ ಅಬೆ ಅವರ ಅಂತ್ಯ ಕ್ರಿಯೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

masthmagaa.com:

ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯ ಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಘಟನೆ ಅಲ್ಲಿನ ಪ್ರಧಾನಿ ಫುಮಿಯೊ ಕಿಶಿದಾ ಅವರ ಕಚೇರಿ ಬಳಿ ನಡೆದಿದೆ. ಮುಂದಿನ ವಾರ ನಡೆಯಲಿರೊ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯನ್ನ ವಿರೋಧಿಸೋದಾಗಿ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ಬಳಿಕ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಯನ್ನ ನಂದಿಸೋಕೆ ಪ್ರಯತ್ನಿಸಿದ ಪೊಲೀಸ್‌ ಅಧಿಕಾರಿ ಗಾಯಗೊಂಡಿದ್ದಾರೆ ಅಂತ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಅಂದ್ಹಾಗೆ ಜಪಾನ್‌ನ್ನ ದೀರ್ಘ ಕಾಲ ಆಳಿದ್ದ ಶಿಂಜೋ ಅಬೆ ಅವ್ರನ್ನ ಜುಲೈ 8 ರಂದು ಚುನಾವಣಾ ಪ್ರಚಾರ ಮಾಡೋವಾಗ ಗುಂಡಿಕ್ಕಿ ಕೊಲ್ಲಲಾಗಿತ್ತು.

-masthmagaa.com

Contact Us for Advertisement

Leave a Reply