ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ರನ್ನು ಮೀಟ್‌ ಆಗಲು ರೆಡಿ ಇದೀವಿ: ಜಪಾನ್‌

masthmagaa.com:

ಉತ್ತರ ಕೊರಿಯಾದ ಸರಣಿ ಮಿಸೈಲ್‌ ಲಾಂಚ್‌ ಹಾಗೂ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದಿಂದಾಗಿ ಜಪಾನ್‌ ಹಾಗೂ ಉತ್ತರ ಕೊರಿಯಾ ನಡುವೆ ಉದ್ವಿಗ್ನತೆ ಇರೋದು ಗೊತ್ತೇಯಿದೆ. ಆದ್ರೆ ಇದೀಗ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ಜಾಂಗ್‌ ಉನ್‌ರನ್ನ ಫೇಸ್‌-ಟು-ಫೇಸ್‌ ಭೇಟಿ ಮಾಡಲು ನಾನು ರೆಡಿ ಇದೀನಿ ಅಂತ ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಅವ್ರು ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ. ಇದೇ ವೇಳೆ ಒಟ್ಟಾಗಿ ಹೊಸ ಯುಗವನ್ನ ತೆರೆಯುವ ದೃಷ್ಟಿಯಿಂದ ಯಾವುದೇ ಕಂಡೀಷನ್ಸ್‌ ಇಲ್ಲದೆ ಯಾವುದೇ ಟೈಮ್‌ನಲ್ಲಿ ಕಿಮ್‌ರನ್ನ ಭೇಟಿಯಾಗಲು ನಾನು ಬಯಸುತ್ತೇನೆ ಅಂತ ಕಿಶಿದಾ ಹೇಳಿದ್ದಾರೆ. ಇತ್ತ ಸೆಪ್ಟಂಬರ್‌ 19ರಿಂದ ಸೆಪ್ಟೆಂಬರ್‌ 26ರವರೆಗೆ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿನ್ನೆಯಿಂದ ಶುರುವಾಗಿದೆ. ಈ ಸಭೆಯಲ್ಲಿ ಯುಕ್ರೇನ್‌ ಯುದ್ಧ, ಕ್ಲೈಮೇಟ್‌ ಚೇಂಜ್‌ ಹಾಗೂ ಸಾರ್ವಜನಿಕ ಆರೋಗ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಇನ್ನು ಈ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಟರ್ಕಿ ಅಧ್ಯಕ್ಷ ತಯ್ಯಿಪ್‌ ಎರ್ಡೋಆನ್‌, ಬ್ರೆಜಿಲ್‌ ಅಧ್ಯಕ್ಷ ಲುಲಾ, ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾಗವಹಿಸುತ್ತಿದ್ದಾರೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೇರಿದಂತೆ ಹಲವರು ಭಾಗವಹಿಸುತ್ತಿಲ್ಲ. ಪ್ರಮುಖವಾಗಿ ಭದ್ರತಾ ಮಂಡಳಿಯ ಕಾಯಂ ಸದಸ್ಯರಲ್ಲಿ ನಾಲ್ಕು ರಾಷ್ಟ್ರಗಳ ಮುಖ್ಯಸ್ಥರು ಕೂಡ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.

-masthmagaa.com

Contact Us for Advertisement

Leave a Reply