ಜಪಾನ್‌ ಪ್ರಧಾನಿ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಸ್ಮೋಕ್‌ ಬಾಂಬ್‌ ಎಸೆತ!

masthmagaa.com:

ಜಪಾನ್‌ನಲ್ಲಿ ಮತ್ತೊಮ್ಮೆ ಪ್ರಧಾನಿಯನ್ನ ಟಾರ್ಗೆಟ್‌ ಮಾಡಿ ದಾಳಿ ಮಾಡಲಾಗಿದೆ. ಹಾಲಿ ಪ್ರಧಾನಿ ಫ್ಯುಮಿಯೋ ಕಿಶಿದಾ ಚುನಾವಣಾ ಅಭಿಯಾನದ ಭಾಗವಾಗಿ ಭಾಷಣ ಮಾಡ್ತಿದ್ದ ವೇಳೆ ಸ್ಪೋಟ ಸಂಭವಿಸಿದೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಪೋಟಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ. ಕಿಶಿದಾ ಅವರು ಅಲ್ಲಿನ ವಕಾಯಾಮದಲ್ಲಿ ಭಾಷಣ ಮಾಡುವಾಗ ಸ್ಪೋಟಕವನ್ನ ಎಸೆಯಲಾಗಿದೆ. ತಕ್ಷಣವೇ ಅವರನ್ನ ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಸ್ಪೋಟದ ಸೌಂಡ್‌ ಕೇಳಿಬಂದಿದ್ದು, ಬಳಿಕ ಎಲ್ಲ ಕಡೆ ಹೊಗೆ ಆವರಿಸಿರೋದು ಕಂಡುಬಂದಿದೆ. ಇನ್ನು ಘಟನೆಯಲ್ಲಿ ಉಂಟಾದ ಸಾವು-ನೋವುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ದೇ ಘಟನೆ ಬಗ್ಗೆ ಜಪಾನ್ ಅಧಿಕಾರಿಗಳು ಕೂಡ ಅಧಿಕೃತ ಮಾಹಿತಿ ನೀಡೋಕೆ ನಿರಾಕರಿಸಿದ್ದಾರೆ ಅಂತ ಹೇಳಲಾಗಿದೆ. ಅಂದ್ಹಾಗೆ ಜಪಾನ್‌ನಲ್ಲಿ ಇತ್ತೀಚಿಗೆ ಅಂದ್ರೆ 2022ರ ಜುಲೈನಲ್ಲಿ ಅಲ್ಲಿನ ಜನಪ್ರಿಯ ಮಾಜಿ ಪ್ರಧಾನಿ ಶಿಂಜೋ ಅಬೆ ಚುನಾವಣಾ ಪ್ರಚಾರ ಮಾಡುವಾಗ ಸಾರ್ವಜನಿಕ ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆ ಘಟನೆ ನಂತರ ಪ್ರಧಾನಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗ್ತಿದೆ. ಆದರೂ ಈಗ ಪ್ರಧಾನಿಯನ್ನ ಟಾರ್ಗೆಟ್‌ ಮಾಡಲಾಗಿದೆ. ಇನ್ನು ಮುಂದಿನ ತಿಂಗಳಲ್ಲಿ ಜಪಾನ್‌, ಜಿ7 ರಾಷ್ಟ್ರಗಳ ಸಚಿವರ ಸಮಾವೇಶವನ್ನ ಆಯೋಜಿಸಲಿದೆ. ಅದಕ್ಕೂ ಮುನ್ನ ಈ ಘಟನೆ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply