ಮತ್ತೊಮ್ಮೆ ಭಾರಿ ಶಕ್ತಿಯ ಮಿಸೈಲ್‌ ಪರೀಕ್ಷಿಸಿದ ಕಿಮ್‌ ಜಾಂಗ್‌ ಉನ್‌!

masthmagaa.com:

ಸೋಮವಾರ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಸೇನೆ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಭಾರಿ ಕ್ಷಿಪಣಿ ಒಂದನ್ನ ಪ್ರಯೋಗ ಮಾಡಿದೆ. 15 ಸಾವಿರ ಕಿಲೋಮೀಟರ್‌ ರೇಂಜ್‌ ಇರೋ ಖಂಡಾಂತರ ಬ್ಯಾಲಸ್ಟಿಕ್‌ ಮಿಸೈಲನ್ನ ಕೊರಿಯಾ ಟೆಸ್ಟ್‌ ಮಾಡಿದೆ. ಈ ಮಿಸೈಲ್‌ ಜಪಾನ್‌ಗೆ ಹೊಂದಿಕೊಂಡಂತೆ ಇರೋ ಪೆಸಿಫಿಕ್‌ ಸಾಗರಕ್ಕೆ ಬಂದು ಬಿದ್ದಿದೆ ಅಂತ ಜಪಾನ್‌ ಹೇಳಿದೆ. ಅಲ್ಲದೇ ಇಡೀ ಅಮೆರಿಕ ದೇಶ ಈ ಮಿಸೈಲ್‌ನ ರೇಂಜ್‌ನಲ್ಲಿ ಬರುತ್ತೆ ಅಂತ ಜಪಾನ್‌ ಹೇಳಿದೆ. ಲ್ಯಾಂಡ್‌ ಆಗೋಕು ಮುಂಚೆ ಈ ಮಿಸೈಲ್‌ ಸುಮಾರು ಒಂದು ಸಾವಿರ ಕಿಲೋ ಮೀಟರ್‌ ದೂರ ಚಲಿಸಿದ್ದು, ಸುಮಾರು 6 ಸಾವಿರ ಕಿಲೋ ಮೀಟರ್‌ ಎತ್ತರ ತಲುಪಿತ್ತು ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply