ವಿಶ್ವಶಕ್ತಿಯಾಗಲಿದೆ ಜಪಾನ್‌..! ರಕ್ಷಣೆಗೆ ಖರ್ಚು ಮಾಡ್ತಿರೋ ಹಣ ಎಷ್ಟು ಗೊತ್ತಾ?

masthmagaa.com:

ಒಂದು ಕಾಲದಲ್ಲಿ ಏಷ್ಯಾದ ಶಕ್ತಿ ಅಂತ ಕರೆಸಿಕೊಂಡು ಬಳಿಕ ಶಾಂತಿ ಪ್ರಿಯರ ನಾಡು ಅಂತ ಹೆಸರಾಗಿದ್ದ ಜಪಾನ್‌ ಇದೀಗ ಮತ್ತೊಮ್ಮೆ ಜಾಗತಿಕ ಮಿಲಿಟರಿ ಶಕ್ತಿಯಾಗೋಕೆ ಸಜ್ಜಾಗಿದೆ. ಎರಡನೇ ಮಹಾಯುದ್ದದ ನಂತರ ಜಪಾನ್‌, ಅತಿದೊಡ್ಡ ಹಾಗೂ ಭಯಾನಕ ಸೇನೆ ಕಟ್ಟೋಕೆ ಮುಂದಡಿ ಇಟ್ಟಿದ್ದು, ಸುಮಾರು 320 ಬಿಲಿಯನ್ ಡಾಲರ್‌ ಅಂದ್ರೆ ಸುಮಾರು 25,92,000 ಕೋಟಿ ರೂಪಾಯಿ ವೆಚ್ಚ ಖರ್ಚು ಮಾಡೋಕೆ ಅಲ್ಲಿನ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೂಲಕ ಜಪಾನ್‌ ತನ್ನ ರಕ್ಷಣಾ ನೀತಿಯಲ್ಲಿ ಹೊಸ ಪಾಲಿಸಿ ತಂದಿದೆ. ಇದು ಐದು ವರ್ಷದ ಯೋಜನೆಯಾಗಿದ್ದು ಇಷ್ಟು ಪ್ರಮಾಣದಲ್ಲಿ ಸೇನೆಗೆ ಹಣ ವಿನಿಯೋಗ ಮಾಡಿದ್ರೆ ಅಮೆರಿಕ ಹಾಗೂ ಚೀನಾ ನಂತರ ರಕ್ಷಣೆಗೆ ಅತಿಹೆಚ್ಚು ಖರ್ಚು ಮಾಡುವ ದೇಶಗಳ ಪಟ್ಟಿಯಲ್ಲಿ ಜಪಾನ್‌ ಮೂರನೇ ಸ್ಥಾನಕ್ಕೆ ಬಂದು ಕೂರಲಿದೆ. ಇನ್ನು ಈ ಬೃಹತ್ ಸೇನಾ ವೆಚ್ಚದ ಬಗ್ಗೆ ಮಾತನಾಡಿದ ಜಪಾನ್‌ ಪ್ರಧಾನಿ ಫಿಮಿಯೋ ಕಿಶಿದಾ ʻಇದು ಜಪಾನ್‌ ಇತಿಹಾಸಕ್ಕೆ ಟರ್ನಿಂಗ್‌ ಪಾಯಿಂಟ್‌ ಅಂತ ಹೇಳಿದ್ದಾರೆ. ಅಲ್ದೇ ʻನಮಗೆ ಅನೇಕ ಸವಾಲುಗಳು ಇರೋದ್ರಿಂದ ನಮಗೆ ಇದು ಅಗತ್ಯ, ಈ ಹೊಸ ಯೋಜನೆಯಿಂದ ಜಪಾನ್‌ ವಲ್ಡ್‌ ಕ್ಲಾಸ್‌ ಮಿಲಿಟರಿ ಆಗಲಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಜಪಾನ್‌, ವಿಶ್ವ ಯುದ್ದದ ನಂತರ ಮಿಲಿಟರಿ ವಿಷಯದಲ್ಲಿ ತುಂಬಾ ಸೈಲೆಂಟ್‌ ಆಗಿತ್ತು. ಹೇಳಿಕೊಳ್ಳುವ ರೀತಿಯಲ್ಲಿ ಅದು ಅಷ್ಟೇನು ಸೇನೆಗೆ ಗಮನ ಕೊಟ್ಟಿರಲಿಲ್ಲ. ಎರಡನೇ ಮಹಾಯುದ್ದಲ್ಲಿ ಅಮೆರಿಕ ಮಿತ್ರಕೂಟಕ್ಕೆ ಬೇಕಾದಷ್ಟು ಹಾನಿ ಮಾಡಿದ್ದ ಜಪಾನ್‌ ಹಾಗೂ ಜರ್ಮನಿಗಳು ಯುದ್ದದಲ್ಲಿ ಸೋತ ನಂತರ ತಮ್ಮ ಮಿಲಿಟರಿ ಶಕ್ತಿಯನ್ನ ಹೆಚ್ಚು ಮಾಡಿಕೊಳ್ಳೋದಕ್ಕೆ ಬೇರೆ ದೇಶಗಳ ರೀತಿಯಲ್ಲಿ ಉದಾಹರಣೆಗೆ ಇಂಗ್ಲೆಂಡ್‌, ಫ್ರಾನ್ಸ್‌, ರಷ್ಯಾ ರೀತಿ ಉತ್ಸಾಹ ತೋರಿರಲಿಲ್ಲ. ದೇಶದ ಅಭಿವೃದ್ದಿ ಕಡೆಗೆ ಗಮನ ಕೊಟ್ವು. ಎಷ್ಟರ ಮಟ್ಟಿಗೆ ಅಂದ್ರೆ ಜಪಾನ್‌ ಹಾಗು ಜರ್ಮನಿ ಅಣ್ವಸ್ತ್ರ ಹೊಂದುವ ಸಾಮಾರ್ಥ್ಯ ಇದ್ರೂ ಸಹ ನಾವು ಶಾಂತಿ ಪ್ರಿಯರು ಅಂತೇಳಿ ಅದನ್ನ ಕೂಡ ಮಾಡಿಟ್ಟುಕೊಳ್ಳಲಿಲ್ಲ. (ಪಾಕಿಸ್ತಾನದಂತಹ ದೇಶ ಅಣ್ವಸ್ತ್ರ ಮಾಡಿಕೊಂಡಿದ್ರು ಸಹ) ಆದ್ರೆ ಈಗ ಇದೇ ಮೊದಲ ಬಾರಿಗೆ ಜಪಾನ್‌ತನ್ನ ರಕ್ಷಣಾ ವಲಯಕ್ಕೆ ದೊಡ್ಡ ಮಟ್ಟದ ಪ್ರಾಮುಖ್ಯತೆ ಕೊಡ್ತಿದ್ದು ಬಿಲಿಯನ್‌ ಗಟ್ಟಲೆ ಹಣ ಸುರಿಯೋಕೆ ಹೊರಟಿದೆ. ಜಪಾನ್‌ನ ಈ ಹೊಸ ಮಿಲಿಟರಿ ನೀತಿಯಲ್ಲಿ ಹೊಸ ಶಸ್ತ್ರಾಸ್ತ್ರಗಳನ್ನ ಕೊಳ್ಳೋದು, ಹಾಗೂ ಇರೋದನ್ನೇ ಆಧುನೀಕರಣಗೊಳಿಸೋದು ಸೇರಿದೆ ಅಂತ ಹೇಳಲಾಗಿದೆ. ಇದು ಜಪಾನ್‌ನ ರಕ್ಷಣೆಗೆ ಮಾತ್ರವಲ್ಲದೇ ಜಪಾನ್‌ನ್ನ ಕೆಣಕುವ ಯಾರ ಮೇಲೂ ವಿದ್ವಂಸಕ ರೀತಿಯಲ್ಲಿ ಪ್ರತಿದಾಳಿ ಮಾಡೋಕೆ ಬಲ ತುಂಬುತ್ತಿರೋ ಪ್ರಯತ್ನ ಅಂತ ಅಲ್ಲಿನ ಅಧಿಕಾರಿಗಳು ಬಣ್ಣಿಸಿದ್ದಾರೆ. ಅಂದಹಾಗೆ ರಷ್ಯಾ ಯುಕ್ರೇನ್‌ನಲ್ಲಿ ಮಾಡಿದ ರೀತಿ ಜಪಾನ್‌ನ ದ್ವೀಪಗಳ ಮೇಲೆ ಹಾಗೂ ತೈವಾನ್‌ ಮೇಲೆ ಚೀನಾ ದಾಳಿ ನಡೆಸೋ ಭೀತಿ ಇರೋದ್ರಿಂದ ಜಪಾನ್‌ ಕೂಡ ತನ್ನ ಮಿಲಿಟರಿ ಶಕ್ತಿ ಹೆಚ್ಚಿಸ್ತಿದೆ. ಆದ್ರೆ ಇದು ನೇರವಾಗಿ ಚೀನಾವನ್ನೇ ಗುರಿಯಾಗಿಸಿಕೊಂಡು ತೆಗೆದುಕೊಂಡಿರೋ ಕ್ರಮ ಅನ್ನೋದನ್ನ ಜಪಾನ್‌ ನೇರವಾಗೇನೂ ಹೇಳಿಲ್ಲ. ಜೊತೆಗೆ ಪಕ್ಕದಲ್ಲೇ ಕಿಮ್‌ ಹಾಗೂ ರಷ್ಯಾ ಕೂಡ ಇರೋದ್ರಿಂದ ಆ ಭಾಗದಲ್ಲಿ ಜಪಾನ್‌ ಒಬ್ಬಂಟಿಯಾಗಿದೆ. ಹೀಗಾಗಿ ಅಮೆರಿಕವನ್ನ ನಂಬಿಕೊಂಡು ತಾನು ಯುಕ್ರೇನ್‌ ರೀತಿ ಸುಮ್ಮನಿದ್ರೆ ಆಗಲ್ಲ ಅನ್ಕೊಂಡು ಜಪಾನ್‌ ಈಗ ಮಿಲಿಟರಿ ಸೂಪರ್‌ ಪವರ್‌ ಆಗೋಕೆ ಹೊರಟಿದೆ. ಇತ್ತ ಜಪಾನ್‌ನ ಈ ನಿರ್ಧಾರದ ಬೆನ್ನಲ್ಲೇ ಉರಿದು ಬಿದ್ದಿರೋ ಚೀನಾ ಫೆಸಿಫಿಕ್‌ ಸಾಗರಕ್ಕೆ ತನ್ನ ಯುದ್ದ ನೌಕೆಯನ್ನ ಕಳುಹಿಸಿಕೊಟ್ಟಿದೆ. ಜೊತೆಗೆ ಈ ಬಗ್ಗೆ ಚೀನಾ ಹೇಳಿಕೆ ಕೂಡ ನೀಡಿದ್ದು ʻಚೀನಾ ಜೊತೆಗಿನ ಸಂಬಂಧದ ವಾಸ್ತವಗಳನ್ನ ಜಪಾನ್‌ ಇಗ್ನೋರ್‌ ಮಾಡಿದೆ. ಇದು ನಮ್ಮ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತೆ. ಎರಡು ದೇಶಗಳ ಸಂಬಂಧವನ್ನ ದಾರಿ ತಪ್ಪಿಸುತ್ತೆ. ಜೊತೆಗೆ ಈ ಹೊಸ ಯೋಜನೆ ಫೇಲ್‌ ಆಗುತ್ತೆ ಅಂತ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply