ಚೀನಾದ ಚಲನವಲನವನ್ನ ಹತ್ತಿರದಿಂದ ಮಾನಿಟರ್‌ ಮಾಡ್ತೀದ್ದೀವಿ: ಜಪಾನ್‌

masthmagaa.com:

ಚೀನಾದ ನೌಕಾಪಡೆಯ ಚಲನವಲನಗಳನ್ನ ನಾವು ಹತ್ತಿರದಿಂದ ಮಾನಿಟರ್‌ ಮಾಡ್ತಿದ್ದೀವಿ ಅಂತ ಜಪಾನ್‌ ಪ್ರಧಾನಿ ಫುಮಿಯೋ ಕಿಶಿದ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆಗೆ ಮಾತುಕತೆ ನಡೆದ ಬಳಿಕ ಈ ಬಗ್ಗೆ ಮಾತನಾಡಿದ ಅವರು ʻ ಚೀನಾ, ರಷ್ಯಾ ಜೊತೆಗೆ ಸೇರಿಕೊಂಡು ನಡೆಸುತ್ತಿರುವ ಜಂಟಿ ಸಮರಾಭ್ಯಾಸಗಳ ಬಗ್ಗೆ, ಅವರ ಚಲನ ವಲನಗಳ ಬಗ್ಗೆ ನಾವು ಗಮನ ನೀಡ್ತೀವಿ. ಈ ಭಾಗದಲ್ಲಿ ಶಾಂತಿ ಕದಡಿ ಈಗಿರೋ ಸ್ಥಿತಿಗತಿಗಳನ್ನ ಬಲವಂತವಾಗಿ ಬದಲಾಯಿಸೋಕೆ ಪ್ರಯತ್ನ ಮಾಡಲಾಗ್ತಿದೆ. ನಾವು ಅದನ್ನ ವಿರೋಧಿಸ್ತೀವಿ. ಹಾಗೆ ಚೀನಾಗೆ ಸಂಬಂಧಪಟ್ಟ ಸಮಸ್ಯೆಗಳನ್ನ ಅಮೆರಿಕ ಜೊತೆಗೆ ಸೇರಿ ಪರಿಹರಿಸ್ತೀವಿ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೇ ಚೀನಾದ ನೌಕಾಪಡೆಯ ಯುದ್ದನೌಕೆಗಳು ಜಪಾನ್‌ಗೆ ಸೇರಿದ ದ್ವೀಪಗಳ ಮದ್ಯೆ ಹಾದು ಹೋಗಿತ್ತು. ಇದರ ಬೆನ್ನಲ್ಲೇ ಈಗ ಜಪಾನ್‌ ಈ ರೀತಿ ಪ್ರತಿಕ್ರಿಯೆ ನೀಡಿದೆ.

-masthmagaa.com

Contact Us for Advertisement

Leave a Reply