ಜಪಾನ್‌ ಭೂಕಂಪ: ರಷ್ಯಾ ಮತ್ತು ದಕ್ಷಿಣ ಕೊರಿಯಾಗೂ ಸುನಾಮಿ ಅಲರ್ಟ್‌!

masthmagaa.com:

ಜಪಾನ್‌ನಲ್ಲಿ ಉಂಟಾಗಿರೋ ಭೂಕಂಪದ ಎಪಿಸೆಂಟರ್‌ ಅಲ್ಲಿನ ಇಶಿಗಾವಾದ ನೋಟೋ ಎಂಬ ಪ್ರದೇಶದಲ್ಲಿದೆ ಅಂತ ವರದಿಯಾಗಿದೆ. ಈ ಭಾಗದಲ್ಲಿ 4.0 ತೀವ್ರತೆಗೂ ಹೆಚ್ಚಿನ ಒಟ್ಟು 21 ಭೂಕಂಪನಗಳು ಉಂಟಾಗಿ ಸುನಾಮಿ ಭೀತಿ ಉಂಟುಮಾಡಿವೆ. ಇನ್ನು 7.4 ತೀವ್ರತೆಯ ಭಾಕಂಪಕ್ಕೆ ನೋಟೋ ಪ್ರದೇಶದ ಕಟ್ಟಡಗಳು, ರಸ್ತೆಗಳನ್ನು ಹಾನಿಗೊಳಿಸಿದೆ. ಹಲವೆಡೆ ಭೂಮಿ ಬಾಯ್ಬಿಟ್ಟಿದೆ. ಭೂಕಂಪದ ಪರಿಣಾಮ, ಹತತ್ರ ಸುಮಾರು 34 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಅಲ್ಲಿನ ಪ್ರಮುಖ ಹೈವೇಗಳು ಕಂಪ್ಲೀಟ್‌ ಆಗಿ ಡ್ಯಾಮೇಜ್‌ ಆಗಿವೆ. ಇನ್ನು ಸುನಾಮಿಯ ಅಲೆಗಳು ಚೀನಾದ ಟೊಯಾಮ ನಗರಕ್ಕೂ ಅಪ್ಪಳಿಸಿರೋದು ವರದಿಯಾಗಿದೆ. ಸುಮಾರು 1.2 ಮೀಟರ್‌ ಎತ್ತರದ ಅಲೆಗಳು ಅಪ್ಪಳಿಸಿರೋದು ವೀಡಿಯೋ ಒಂದ್ರಲ್ಲಿ ಸೆರೆಯಾಗಿದೆ. ಈ ಬೆನ್ನಲ್ಲೇ ಜಪಾನ್‌ ಹತ್ರದಲ್ಲಿರೋ ರಷ್ಯಾದ ಸಖಾಲಿನ್‌ ದ್ವೀಪ ಹಾಗೂ ವ್ಲಾಡಿಯೋಸ್ಟಾಕ್‌ ನಗರಕ್ಕೆ ʻಸುನಾಮಿ ಅಲರ್ಟ್‌ʼ ನೀಡಲಾಗಿದೆ. ಇವೆಲ್ಲದ್ರ ನಡುವೆ ಇದೀಗ ಜಪಾನ್‌ನಲ್ಲಿರೋ ಭಾರತೀಯ ಎಂಬಸಿ, ಎಮರ್ಜೆನ್ಸಿ ಕಂಟ್ರೋಲ್‌ ರೂಮ್‌ ಸೆಟಪ್‌ ಮಾಡಿದೆ. ಈ ಮೂಲಕ ಜಪಾನ್‌ನ ಭೂಕಂಪಕ್ಕೆ ಸಂಬಂಧಿಸಿ ಯಾರ್‌ ಬೇಕಾದ್ರೂ ಈ ಕಂಟ್ರೋಲ್‌ ರೂಮ್‌ ಸಂಪರ್ಕಿಸಿ ಸಹಾಯ ಪಡೀಬೋದಾಗಿದೆ. ಜಪಾನ್‌ನಲ್ಲಿ 5 ಅಡಿಗೂ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಭೂಕಂಪ ಉಂಟಾದ ಕೇಂದ್ರದ 300 ಕಿಲೋ ಮೀಟರ್‌ ರೇಡಿಯಸ್‌ವರೆಗೆ ಸುನಾಮಿ ಅಲೆಗಳು ತಲುಪಲಿವೆ ಅಂತ ಅಲರ್ಟ್‌ ನೀಡಲಾಗಿದೆ. ಇದ್ರೊಂದಿಗೆ ದಕ್ಷಿಣ ಕೊರಿಯಾದ ಗ್ಯಾಂಗ್ವಾನ್‌ ಪ್ರಾಂತ್ಯದ ಜನರಿಗೂ ಕೂಡ ಮುನ್ನೆಚ್ಚರಿಕೆ ವಹಿಸುವಂತೆ ವಾರ್ನಿಂಗ್‌ ನೀಡಲಾಗಿದೆ. ಜೊತೆಗೆ ತಗ್ಗು ಪ್ರದೇಶದಿಂದ ಎತ್ತರದ ಪ್ರದೇಶಕ್ಕೆ ಸ್ಥಳಾಂತರವಾಗೋಕೂ ಸೂಚನೆ ನೀಡಲಾಗಿದೆ. ಯಾಕಂದ್ರೆ ಭೂಕಂಪದಿಂದಾಗಿ ಗ್ಯಾಂಗ್ವಾನ್‌ ಪ್ರಾಂತ್ಯದಲ್ಲಿ ಸಮುದ್ರ ಮಟ್ಟ ಏರಿಕೆಯಾಗಲಿದೆ ಅಂತ ದಕ್ಷಿಣ ಕೊರಿಯಾದ ಹವಮಾನ ಸಂಸ್ಥೆ ತಿಳಿಸಿದೆ.

-masthmagaa.com

Contact Us for Advertisement

Leave a Reply