ಏರ್‌ಪೋರ್ಟ್‌ನಲ್ಲಿ ವಿಮಾನಗಳ ಡಿಕ್ಕಿ: 379 ಮಂದಿ ಎಸ್ಕೇಪ್

masthmagaa.com:

ಭೂಕಂಪ ಸುನಾಮಿಯಿಂದ ತತ್ತರಿಸಿರೋ ಜಪಾನ್‌ನಲ್ಲಿ ಮತ್ತೊಂದು ಘಟನೆ ಸಂಭವಿಸಿದೆ. ಟೋಕ್ಯೋದ ಹನೆಡಾ ಏರ್‌ಪೋರ್ಟ್‌ನಲ್ಲಿ 367 ಪ್ರಯಾಣಿಕರಿದ್ದ ವಿಮಾನವೊಂದು ಕೋಸ್ಟ್‌ ಗಾರ್ಡ್‌ ವಿಮಾನಕ್ಕೆ ಡಿಕ್ಕಿ ಹೊಡೆದು ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರಿದ್ದ ವಿಮಾನ ಲ್ಯಾಂಡ್‌ ಆಗೋ ಟೈಮಲ್ಲಿ ಈ ದುರ್ಘಟನೆ ಸಂಭವಿಸಿದೆ. ಆದ್ರೆ ಅದೃಷ್ಟವಶಾತ್‌ ಎಲ್ಲಾ 367 ಪ್ರಯಾಣಿಕರು ಹಾಗೂ 12 ಮಂದಿ ಸಿಬ್ಬಂದಿಯನ್ನ ವಿಮಾನ ನಿಂತ ತಕ್ಷಣವೇ ರಕ್ಷಣೆ ಮಾಡಲಾಗಿದೆ. ಇನ್ನು ಆ ವಿಮಾನ ಮಾತ್ರ ಸುಟ್ಟು ಬೂದಿಯಾಗಿದೆ. ಇನ್ನು ಕೋಸ್ಟ್‌ ಗಾರ್ಡ್‌ ವಿಮಾನದಲ್ಲಿ 6 ಮಂದಿ ಸಿಬ್ಬಂದಿ ಇದ್ರು ಅಂತ ಹೇಳಲಾಗ್ತಿದ್ದು, ಈ ಪೈಕಿ ಐವರು ಮೃತಪಟ್ಟಿದ್ದಾರೆ ಅಂತ ವರದಿಯಾಗಿದೆ. ಈ ವಿಮಾನ ಭೂಕಂಪದ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜನೆಗೊಂಡಿತ್ತು ಅಂತ ಹೇಳಲಾಗ್ತಿದೆ. ಇತ್ತ ಭೂಕಂಪದಿಂದ ಸೃಷ್ಟಿಯಾಗಿದ್ದ ಸುನಾಮಿ ದುರ್ಬಲಗೊಂಡಿದ್ದು, ಸುನಾಮಿ ಅಲರ್ಟ್‌ನ್ನ ಸರ್ಕಾರ ವಾಪಸ್‌ ಪಡೆದಿದೆ. ಆದ್ರೆ 7.6 ತೀವ್ರತೆಯ ಭೂಕಂಪದಿಂದ ಬಹಳಷ್ಟು ಹಾನಿ ಉಂಟಾಗಿದ್ದು, ಇದ್ರಿಂದ ಕುಸಿದಿರೋ ಅವಶೇಷಗಳ ಮಧ್ಯೆ ಹಲವರು ಸಿಲುಕಿರೋ ನಿರೀಕ್ಷೆ ಇದೆ ಅಂತಯ ಹೇಳಲಾಗ್ತಿದೆ. ಅಲ್ಲದೆ ವಿಪರೀತವಾಗಿ ಭೂಮಿ ಬಿರುಕು ಬಿಟ್ಟಿರೋ ಪ್ರದೇಶಗಳಲ್ಲಿ ಜನರು ಜೀವಂತ ಸಮಾಧಿ ಆಗಿರ್ಬೋದು ಅಂತ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಹಾಗೂ ಕಾಣೆಯಾದವರಿಗಾಗಿ ಹುಡುಕಾಟ ನಡೆಸಲಾಗ್ತಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply