ಮಂಗಳನ ಅಧ್ಯಯನಕ್ಕೆ ಜೋಡಿಯಾದ ನಾಸಾ ಮತ್ತು ಮತ್ತು ಖಾಸಗಿ ಸಂಸ್ಥೆ ಬ್ಲೂ ಒರಿಜಿನ್‌!

masthmagaa.com:

ಜೆಫ್‌ ಬೆಜೋಸ್‌ ಒಡೆತನದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಬ್ಲೂ ಒರಿಜಿನ್‌, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಜೊತೆ ತನ್ನ ಮೊದಲ ಕಾಂಟ್ರಾಕ್ಟ್‌ಗೆ ಸಹಿ ಹಾಕಿದೆ. ಉಭಯ ಸಂಸ್ಥೆಗಳು ಒಟ್ಟಾಗಿ ʻಮಾರ್ಸ್‌ ಮಿಷನ್‌ʼ ಕೈಗೊಳ್ಳೋಕೆ ಮುಂದಾಗಿದ್ದು, ಮುಂದಿನ ವರ್ಷ ಮಂಗಳ ಗ್ರಹದ ಸುತ್ತ ಇರೋ ಮ್ಯಾಗ್ನೆಟಿಕ್‌ ಫೀಲ್ಡ್‌ ಅದ್ಯಯನಕ್ಕೆ ಉಪಗ್ರಹ ಉಡಾವಣೆ ಮಾಡಲಾಗುತ್ತೆ ಅಂತ ಹೇಳಿವೆ. ಇನ್ನು ಬ್ಲೂ ಒರಿಜಿನ್‌ ಇತ್ತೀಚೆಗೆ ಅಭಿವೃದ್ಧಿ ಪಡಿಸಿರೋ ಗ್ಲೆನ್‌ ಹೆವಿ ಲಿಫ್ಟ್‌ ರಾಕೆಟ್‌ನಲ್ಲಿ ತಮ್ಮ ಡುಯೆಲ್‌ ಸ್ಪೇಸ್‌ಕ್ರಾಫ್ಟ್‌ ESCAPADE ಅನ್ನ 2024ರಲ್ಲಿ ಲಾಂಚ್‌ ಮಾಡೋಕೆ ಯೋಜಿಸಲಾಗಿದೆ ಅಂತ ನಾಸಾ ಹೇಳಿದೆ.

-masthmagaa.com

Contact Us for Advertisement

Leave a Reply