ಕಾಶ್ಮೀರದ ವಿಚಾರವಾಗಿ ಮತ್ತೆ ಭಾರತದಿಂದ ಮಾತಿನ ಏಟು ತಿಂದ ಪಾಕ್!

masthmagaa.com:

ಆಂತರಿಕ ಸಮಸ್ಯೆಗಳು ಕಿತ್ತು ತಿಂತಿದ್ರೂ ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸೋದನ್ನ ಮಾತ್ರ ಪಾಕಿಸ್ತಾನ ಮರೆಯಲ್ಲ. ಆವಾಗಾವಾಗ ಕಾಶ್ಮೀರ ವಿಚಾರವನ್ನ ಎತ್ತಿ ಭಾರತದ ಕೈಯಲ್ಲಿ ಮಂಗಳಾರತಿ ಮಾಡ್ಸಿಕೊಂಡಿಲ್ಲ ಅಂದ್ರೆ ಪಾಕ್‌ಗೆ ಸಮಾಧಾನ ಆಗಲ್ಲ. ಇದೀಗ ಪಾಕ್‌ ನಿನ್ನೆ ಅಂದ್ರೆ ಜನವರಿ 5 ರಂದು Right to Self-Determination Day ಅಥ್ವಾ ʻಸ್ವಯಂ-ನಿರ್ಣಯ ಹಕ್ಕು ದಿನʼವನ್ನ ಆಚರಿಸಿದೆ. ಅಂದ್ರೆ ಜನವರಿ 5, 1949ರಂದು ಕಾಶ್ಮೀರಿ ಜನರು ತಾವು ಪಾಕ್‌ ಸೇರಬೇಕಾ ಅಥ್ವಾ ಭಾರತ ಸೇರಬೇಕಾ ಅನ್ನೊ ಬಗ್ಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳೋಕೆ ಅನುಮತಿ ನೀಡ್ಬೇಕು ಅಂತ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ನಿರ್ಣಯೊಂದನ್ನ ತಂದಿದ್ದ ದಿನ. ಅದನ್ನ ನೆನಪಿಸೋಕೆ ಪಾಕ್‌ ಆಕ್ರಮಿತ ಜಮ್ಮು -ಕಾಶ್ಮೀರದಲ್ಲಿ ರ್ಯಾಲಿಗಳನ್ನ ಮಾಡಲಾಗಿದೆ. ಅಲ್ದೇ ಸೋಷಿಯಲ್‌ ಮೀಡಿಯಾದಲ್ಲಿ Right to Self-Determination Day ಕ್ಯಾಂಪೇನ್‌ ಮಾಡಿದೆ. ʻಕಾಶ್ಮೀರಿ ಸಮಸ್ಯೆ, ದಕ್ಷಿಣ ಏಷ್ಯಾದ ಶಾಂತಿ ಹಾಗೂ ಅಭಿವೃದ್ದಿ ಜೊತೆಗೆ ಲಿಂಕ್‌ ಹೊಂದಿದೆ. ಈ ಸ್ವಯಂ ನಿರ್ಣಯ ಹಕ್ಕು ದಿನದಂದು, ಕಾಶ್ಮೀರಿ ಜನರಿಗೆ ಅವರ ಭವಿಷ್ಯವನ್ನ ಸ್ವತಃ ಅವರೇ ನಿರ್ಧಾರಿಸೋ ಕಾನೂನು ಹಕ್ಕನ್ನ ನೀಡುವಲ್ಲಿ ಜಾಗತಿಕ ನಾಯಕರು ಬೆಂಬಲ ನೀಡಬೇಕುʼ ಅಂತ ಟ್ವಿಟರ್‌ನಲ್ಲಿ ಖುದ್ದು ಪಾಕ್‌ ಪ್ರಧಾನಿ ಶೆಹಬಾಕ್‌ ಶರೀಫ್‌ ಕರೆ ಕೊಟ್ಟಿದ್ದಾರೆ. ಜೊತೆಗೆ ಭಾರತ ತನ್ನ ಆಗಸ್ಟ್‌ 5ರ ನಿರ್ಧಾರ ಅಂದ್ರೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿರೋದನ್ನ ಹಿಂತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಇದಕ್ಕೆ ಭಾರತ ಕೂಡ ಪ್ರತಿಕ್ರಿಯಿಸಿದೆ. ವಿದೇಶಾಂಗ ವಕ್ತಾರ ಅರಿಂಧಮ್‌ ಭಗ್ಚಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅನ್ನೊದನ್ನ ಅದೆಷ್ಟು ಬಾರಿ ಹೇಳಿದ್ದೇವೆ ಅನ್ನೋದು ಆ ದೇವರಿಗೆ ಗೊತ್ತು. ಜಮ್ಮು-ಕಾಶ್ಮೀರದ ವಿಷಯವಾಗಿ ನಮ್ಮ ನಿಲುವನ್ನ ಈಗಾಗಲೇ ಹಲವು ಬಾರಿ ಹೇಳಿದ್ದೇವೆ..370ನೇ ವಿಧಿ ಅದು ಸಂಪೂರ್ಣವಾಗಿ ಭಾರತದ ಸಂವಿಧಾನ ಹಾಗೂ ಸಾರ್ವಭೌಮತ್ವದ ವಿಷಯ. ಒಂದು ದಿನ ಸೋಷಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ ಮಾಡಿದ್ರೆ, ರಿಯಾಲಿಟಿಯಲ್ಲಿ ಹಾಗೂ ಭಾರತದ ನಿಲುವಲ್ಲಿ ಏನು ಬದಲಾವಣೆ ಆಗಲ್ಲ ಅಂತ ಪಾಕಿಸ್ತಾನದ ಪುಂಡಾಟಕ್ಕೆ ಚಾಟಿ ಬೀಸಿದ್ದಾರೆ.

-masthmagaa.com

Contact Us for Advertisement

Leave a Reply