ರಾಜಸ್ಥಾನದಲ್ಲಿ ಕೋಮುಗಲಭೆ: ಸಿಎಂ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡ್ಬೇಕು

masthmagaa.com:

ರಾಜಸ್ಥಾನದ ಜೋಧಪುರದಲ್ಲಿ ಸೋಮವಾರ ಸಂಜೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಈದ್‌ ಹಬ್ಬಕ್ಕೂ ಮುನ್ನ ಜಲೋರಿ ಗೇಟ್‌ ಪ್ರದೇಶದಲ್ಲಿ ಬಾವುಟ ಹಾರಿಸೋ ವಿಚಾರವಾಗಿ ಸಮುದಾಯಗಳ ನಡುವೆ ವಿವಾದ ಉಂಟಾಗಿದೆ. ಈದ್‌ ಹಬ್ಬದ ಜೊತೆಗೆ ಜೋಧಪುರದಲ್ಲಿ 3 ದಿನಗಳ ಪರಶುರಾಮ ಜಯಂತಿ ಕೂಡ ನಡೀತಿದೆ. ಹಾಗೂ 2 ಸಮುದಾಯದ ಜನ ತಮ್ಮ ತಮ್ಮ ಧಾರ್ಮಿಕ ಬಾವುಟಗಳನ್ನ ಎಲ್ಲ ಕಡೆ ಹಾರಿಸೋಕೆ ಮುಂದಾಗಿದ್ದಾರೆ. ಬಲ್ಮಕುಂಡ್‌ ಬಿಸ್ಸಾ ವೃತ್ತದಲ್ಲಿ ಹಿಂದೂ ಗುಂಪಿನ ಬಾವುಟವನ್ನ ಕಿತ್ತು ಹಾಕೋಕೆ ಮುಸ್ಲಿಂ ಸಮುದಾಯದ ಕೆಲವರು ಪ್ರಯತ್ನಿಸಿದ್ರು. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಘರ್ಷಣೆಗೆ ಎಡೆಮಾಡಿಕೊಟ್ಟಿದೆ ಅಂತ ವರದಿಯಾಗಿದೆ. ಪರಿಸ್ಥಿತಿಯನ್ನ ಸುಧಾರಿಸೋಕೆ ಪೋಲಿಸ್‌ ಪಡೆ ಸ್ಥಳಕ್ಕೆ ಧಾವಿಸಿದೆ. ಜನ್ರನ್ನ ಚದುರಿಸೋಕೆ ಪೋಲಿಸ್‌ ಪಡೆ ಬಲ ಪ್ರಯೋಗ ಮಾಡಿದ್ದು, ಟಿಯರ್‌ ಗ್ಯಾಸ್‌ ಅಥವಾ ಅಶ್ರುವಾಯು ಸಿಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೋಲಿಸರ ಮೇಲೆ ಕೂಡ ದಾಳಿ ನಡೆದಿವೆ. ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಕನಿಷ್ಟ ನಾಲ್ವರು ಪೋಲಿಸ್‌ರು ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಇಂಟರ್‌ನೆಟ್‌ ಸೇವೆಗಳನ್ನ ಬಂದ್‌ ಮಾಡಿ‌ ಅಂತ ಡಿವಿಸನಲ್‌ ಕಮೀಷನರ್‌ ಹಿಮಾಂಶು ಗುಪ್ತಾ ಆದೇಶ ಹೊರಡಿಸಿದ್ದಾರೆ. ಜೋಧಪುರ್‌ನ 10 ಪೋಲಿಸ್‌ ಠಾಣೆಯ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇವತ್ತಿನ ಈದ್‌ನ ನಮಾಜ್‌ನ್ನು ಪೋಲಿಸ್‌ ಭದ್ರತೆಯಲ್ಲಿ ನಡೆಸಲಾಗಿದೆ ತಿಳಿಸಿವೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್, ಜನ್ರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಹಾಗೇ ಏನೇ ಆದ್ರೂ ತಮ್ಮ ಸರ್ಕಾರ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಪರಿಸ್ಥಿತಿಯ ಬಗ್ಗೆ ಚರ್ಚಿಸೋಕೆ ಗೆಹ್ಲೋಟ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.‌ ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಬಿಜೆಪಿ, ಈ ಘಟನೆಯ ಜವಾಬ್ದಾರಿ ಹೊತ್ತು ಸಿಎಂ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡ್ಬೇಕು ಅಂತ ಆಗ್ರಹಿಸಿದ್ದಾರೆ.

ಇನ್ನು ಇತ್ತೀಚೆಗೆ ಜಹಾಂಗೀರ್​​ಪುರಿಯಲ್ಲಿ ಕೋಮುಘರ್ಷಣೆ ನಡೆದಿದ್ರಿಂದ ಈದ್‌ ಹಬ್ಬದ ಪ್ರಯುಕ್ತ ದಿಲ್ಲಿಯ ಜಾಮಿಯಾ ಮಸೀದಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಪೂರ್ವ ದಿಲ್ಲಿಯ ಜಹಾಂಗೀರ್‌ಪುರಿ, ಪಶ್ಚಿಮ ಮತ್ತು ದಕ್ಷಿಣ ದಿಲ್ಲಿಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.

-masthmagaa.com

Contact Us for Advertisement

Leave a Reply