ಬೈಡೆನ್‌ ಇಡುವ ಪ್ರತಿ ಹೆಜ್ಜೆಗೂ ಸೂಚನೆ! ಇನ್‌ಸ್ಟ್ರಕ್ಶನ್‌ ಪೇಪರ್‌ ಜೊತೆ ಸಿಕ್ಕಿಬಿದ್ದ ಅಮೆರಿಕ ಅಧ್ಯಕ್ಷ!

masthmagaa.com:

ಇಂಡೋನೇಷ್ಯಾದಲ್ಲಿ ನಡೆದಿದ್ದ ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಭಾಗಿಯಾಗಿದ್ರು. ಈ ವೇಳೆ ಬೈಡೆನ್‌ ಪೇಪರ್‌ನಲ್ಲಿರೊ ಕೆಲ ಇನ್‌ಸ್ಟ್ರಕ್ಶನ್‌ಗಳನ್ನ ಬಳಕೆ ಮಾಡ್ತಿರೋದು ಕಂಡು ಬಂದಿದೆ. ಅಂದ್ರೆ ಎಲ್ಲಿ ಕೂರಬೇಕು, ಯಾವಾಗ ಮಾತಾಡಬೇಕು, ಎಷ್ಟು ನಿಮಿಷ ಮಾತಾಡಬೇಕು, ಯಾರ ಜೊತೆ ಫೋಟೊ ತೆಗೆಸಿಕೊಳ್ಳಬೇಕು ಹೀಗೆ ಹಲವಾರು ಸೂಚನೆಗಳನ್ನ ಬೈಡನ್‌ರಿಗೆ ಪೇಪರ್‌ನಲ್ಲಿ ಡಿಟೇಲ್‌ ಆಗಿ ಆಗಿ ಟೈಪ್‌ ಮಾಡಿ ನೀಡಲಾಗಿದೆ. ಅಲ್ದೇ ಅವರು ಸಭೆಯಲ್ಲಿ ಏನು ಮಾತಾಡಬೇಕು ಅನ್ನೊದನ್ನ ಕೂಡ ವಿವರವಾಗಿ ಕೊಡಲಾಗಿದೆ. ಬೈಡೆನ್‌ ಈ ಪೇಪರ್‌ ಹಿಡಿದುಕೊಂಡಿರೋದನ್ನ ರಿಪಬ್ಲಿಕನ್‌ ನ್ಯಾಷನಲ್‌ ಕಮಿಟಿ ರಿಸರ್ಚ್‌ ಸಂಸ್ಥೆ ತನ್ನ ಅಧಿಕೃತ ಟ್ವಿಟರ್‌ ಅಕೌಂಟ್‌ನಲ್ಲಿ ಶೇರ್‌ ಮಾಡಿದೆ. ಇನ್ನು ಬೈಡೆನ್‌ ಈ ರೀತಿ ಸಿಕ್ಕಿ ಹಾಕಿಕೊಳ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಜೂನ್‌ನಲ್ಲಿ ತಾವು ಹೇಗೆ ನಡೆದುಕೊಳ್ಳಬೇಕು ಅನ್ನೊದನ್ನ ಪೇಪರ್‌ನಲ್ಲಿ ಬರೆದು ಕೊಡಲಾಗಿತ್ತು. ಅದ್ರಲ್ಲಿ ರೂಸ್‌ವೆಲ್ಟ್‌ ರೂಮ್‌ಗೆ ಹೋಗಿ, ಎಲ್ಲರಿಗೂ ಹೆಲೋ ಹೇಳಿ ಅಂತ ಬರೆಯಲಾಗಿತ್ತು.

-masthmagaa.com

Contact Us for Advertisement

Leave a Reply