ಜೋ ಬೈಡೆನ್‌ ಮೆಂಟಲಿ, ಫಿಸಿಕಲಿ ಫಿಟ್‌ ಇಲ್ಲ: ಅಮೆರಿಕ ಅಧಿಕಾರಿ

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಆರೋಗ್ಯದ ವಿಚಾರವಾಗಿ ಅಮೆರಿಕದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಮರೆವು, ವಯೋಸಹಜ ಆರೋಗ್ಯಸಮಸ್ಯೆಗಳು ಬೈಡೆನ್‌ರನ್ನ ಕಾಡ್ತಿವೆ. ಸೋ ಈಗ ವೆಸ್ಟ್‌ ವರ್ಜಿನಿಯಾದ ಅಟಾರ್ನಿ ಜೆನರಲ್‌ ಪ್ಯಾಟ್ರಿಕ್‌ ಮೊರಿಸ್ಸಿ, ಬೈಡೆನ್‌ ವಿರುದ್ಧ ಹರಿಹಾಯ್ದಿದ್ದಾರೆ. 81 ವರ್ಷದ ಜೋ ಬೈಡೆನ್‌ ಅವರ ಕರ್ತವ್ಯ ನಿರ್ವಹಿಸೋಕೆ ಮೆಂಟಲಿ ಹಾಗೂ ಫಿಸಿಕಲಿ ಫಿಟ್‌ ಇಲ್ಲ ಅಂತ ಹೇಳಿದ್ದಾರೆ. ಅಲ್ಲದೆ ವೈಸ್‌ ಪ್ರೆಸಿಡೆಂಟ್‌ ಕಮಲಾ ಹ್ಯಾರಿಸ್‌ ಈ ಕೂಡಲೆ ಜೋ ಬೈಡೆನ್‌ ವಿರುದ್ಧ 25ನೇ ಅಮೆಂಡ್‌ಮೆಂಟ್‌ ಜಾರಿಗೆ ತಂದು, ಅವ್ರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಅಂತ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೆ ಬೈಡೆನ್‌ ವಿಚಾರವಾಗಿ ಸಂಸ್ಥೆಯೊಂದು 388 ಪುಟಗಳ ಸ್ಪೆಷಲ್‌ ಕೌನ್ಸಿಲ್‌ ರಿಪೋರ್ಟ್‌ ರಿಲೀಸ್‌ ಮಾಡಿತ್ತು. ಇದ್ರಲ್ಲಿ ಅಧ್ಯಕ್ಷ ಬೈಡೆನ್‌ ಕಡಿಮೆ ಜ್ಞಾಪಕ ಶಕ್ತಿ ಇರೋ ಒಳ್ಳೆಯ, ವಯಸ್ಸಾದ ವ್ಯಕ್ತಿ ಅಂತೇಳಿತ್ತು. ಜೊತೆಗೆ ಆಗಾಗ ಸ್ಟೇಜ್‌ ಮೇಲೆ ಕೂಡ ಬೈಡೆನ್‌ ಅರಳು ಮರುಳಿನ ರೀತಿ ವರ್ತಿಸ್ತಿರ್ತಾರೆ. ಈ ಎಲ್ಲಾ ಕಾರಣದಿಂದ ಅಟಾರ್ನಿ ಜನರಲ್‌ ಪ್ಯಾಟ್ರಿಕ್‌ ಮೊರಿಸ್ಸಿ ಬೈಡೆನ್‌ ವಿರುದ್ದ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply