ಮುನಿಸಿನ ನಡುವೆಯೂ ಸೌದಿ ಯುವರಾಜನ ಭೇಟಿಯಾಗ್ತಾರಾ ಬೈಡೆನ್‌?

masthmagaa.com:

ಅಮೆರಿಕ ಅಧ್ಯಕ್ಷರಾದ್ಮೇಲೆ ಇದೇ ಮೊದಲ ಬಾರಿಗೆ ಜೋ ಬೈಡೆನ್‌ ಜುಲೈ ಮದ್ಯ ಭಾಗದಲ್ಲಿ ಮಿಡಲ್‌ ಈಸ್ಟ್‌ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಸೌದಿ ಅರೇಬಿಯಾಗೂ ಹೋಗಲಿದ್ದು ಯುವರಾಜ ಮಹ್ಮದ್‌ ಬಿನ್‌ ಸಲ್ಮಾನ್‌ರನ್ನ ಭೇಟಿಯಾಗಲಿದ್ದಾರೆ ಅಂತ ಮಾಹಿತಿ ಸಿಕ್ತಾಯಿದೆ. ಪತ್ರಕರ್ತ ಜಮಾಲ್‌ ಕಶೌಗಿ ಹತ್ಯೆ ವಿಚಾರವಾಗಿ ಮತ್ತು ನಾನು ಸೌದಿ ರಾಜನ ಜೊತೆಗೆ ವ್ಯವಹಾರ ಮಾಡ್ತೀನಿ ಅನ್ನೋ ಬೈಡೆನ್‌ರ ಆಟಿಟ್ಯೂಡ್‌ ಸ್ಟೇಟ್‌ಮೆಂಟ್‌ಗಳಿಂದ ಬೈಡೆನ್‌ ಹಾಗೂ ಸೌದಿ ಯುವರಾಜನ ಮಧ್ಯೆ ಸಂಬಂಧ ಹಳಸೋಗಿತ್ತು. ಇದರ ನಡುವೆಯೂ ಇದೀಗ ಬೈಡೆನ್‌ ಯುವರಾಜನ ಬಳಿಗೇ ಹೋಗಿ ಭೇಟಿ ಮಾಡ್ತಾರೆ ಅಂತ ವೈಟ್‌ಹೌಸ್‌ ಅಂದ್ರೆ ಅಮೆರಿಕದ ಅಧ್ಯಕ್ಷೀಯ ಕಛೇರಿಯೇ ಹೇಳಿದೆ. ಅಂದ್ಹಾಗೆ ಜುಲೈ 13 ರಿಂದ 16ರ ವರೆಗೆ ಬೈಡೆನ್‌ ಈ ಪ್ರವಾಸ ಕೈಗೊಳ್ತಿದ್ದು ಸೌದಿ ಜೊತೆಗೆ ಇಸ್ರೇಲ್‌, ವೆಸ್ಟ್‌ ಬ್ಯಾಂಕ್‌ಗೂ ಭೇಟಿ ನೀಡ್ತಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply