ಅಮೆರಿಕ ಮಾಡಿದ ನೆರವಿಗೆ ಯುಕ್ರೇನ್‌ ಹೆಚ್ಚು ಕೃತಜ್ಞತೆ ತೋರಿಸಬೇಕು: ಜೋ ಬೈಡೆನ್

masthmagaa.com:

ಯುಕ್ರೇನ್‌ ತನ್ನ ಪ್ರದೇಶದಲ್ಲಿ ನಿಷೇಧಿತ ಸ್ಪೋಟಕಗಳನ್ನ ತಯಾರಿಸ್ತಿದೆ ಅಂತ ರಷ್ಯಾ ಯುಎನ್‌ನಲ್ಲಿ ಆರೋಪ ಮಾಡಿತ್ತು. ಈ ಕುರಿತು ಯುಎನ್‌ನ ಪರಮಾಣು ಕಣ್ಗಾವಲು ಸಂಸ್ಥೆ ಯುಕ್ರೇನ್‌ನಲ್ಲಿ ತನಿಖೆ ಶುರು ಮಾಡಿದೆ. ಅಂದ್ಹಾಗೆ ಕೊಳಕು ಸ್ಟೋಟಕ ಅಂತ ಕರೆಯಲಾಗುವ ಇದರಲ್ಲಿ, ಜೈವಿಕ ವಿಷಕಾರಿ ವಸ್ತುಗಳು, ಅಪಾಯಕಾರಿ ವಿಕಿರಣ ಸೂಸೋ ವಸ್ತುಗಳು ಇವೆ ಅಂತ ಹೇಳಲಾಗ್ತಿದೆ. ಇತ್ತ ಯುಕ್ರೇನ್‌ನ ಪವರ್‌ ಗ್ರಿಡ್‌ಗಳ ಮೇಲೆ ರಷ್ಯಾ ಮಾಡ್ತಿರೊ ದಾಳಿಗಳು, ಕ್ರೈಮಿಯಾ ಡ್ರೋನ್‌ ದಾಳಿಗೆ ನೀಡಿದ ಪ್ರತಿಕ್ರಿಯೆ ಅಂತ ರಷ್ಯಾ ಹೇಳಿದೆ. ಇನ್ನೊಂದ್‌ ಕಡೆ ಯುಕ್ರೇನ್‌ನಲ್ಲಿ ರಷ್ಯಾ ಏನಾದ್ರೂ ನ್ಯೂಕ್ಲಿಯರ್‌ ವೆಪನ್‌ಗಳನ್ನ ಬಳಸಿದ್ರೆ, ಗಂಭೀರ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ ಅಂತ ರಿಷಿ ಸುನಾಕ್‌ರ ಯುಕೆ ಕೂಡ ವಾರ್ನಿಂಗ್‌ ನೀಡಿದೆ. ಇನ್ನು ಸಂಘರ್ಷ ಆರಂಭವಾದಾಗಿನಿಂದ ಯುಕ್ರೇನ್‌ಗೆ ನಿರಂತರವಾಗಿ ಅಮೆರಿಕ ನೆರವು ನೀಡ್ತಿದೆ. ಆದ್ರೆ ಜೂನ್‌ನಲ್ಲಿ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕಾಲ್‌ ಮಾಡಿದಾಗ ಬೈಡೆನ್ ಸಿಟ್ಟಾಗಿದ್ರು ಅಂತ ತಿಳಿದು ಬಂದಿದೆ. ಈ ವೇಳೆ ಏರುಧ್ವನಿಯಲ್ಲಿ ಮಾತಾಡಿದ ಬೈಡೆನ್‌, ಝೆಲೆನ್ಸ್ಕಿ ನಮಗೆ ಹೆಚ್ಚು ಕೃತಜ್ಞತೆಯನ್ನ ತೋರಿಸಬಹುದು ಅಂತ ಹೇಳಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿವೆ. ಕಾಲ್‌ ಬಳಿಕ ಝೆಲೆನ್ಸ್ಕಿ ಸಾರ್ವಜನಿಕವಾಗಿ ವಿಡಿಯೋ ಮೆಸೇಜ್‌ ಮೂಲಕ ಬೈಡೆನ್‌ರಿಗೆ ಧನ್ಯವಾದಗಳನ್ನ ತಿಳಿಸಿದ್ರು ಎನ್ನಲಾಗಿದೆ. ಅಂದ್ಹಾಗೆ ಇಲ್ಲಿಯವರೆಗೆ ರಷ್ಯಾ ಪಡೆಯನ್ನ ಎದುರಿಸೋಕೆ ಅಮೆರಿಕ ಒಟ್ಟು 18.5 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 1.51 ಲಕ್ಷ ಕೋಟಿ ರೂಪಾಯಿ ಮಿಲಿಟರಿ ನೆರವನ್ನ ಯುಕ್ರೇನ್‌ಗೆ ನೀಡಿದೆ. ಇನ್ನು ಕ್ರೈಮಿಯಾ ದಾಳಿ ನಂತರ ಯುಕ್ರೇನ್‌ನ ಧಾನ್ಯ ರಫ್ತು ಒಪ್ಪಂದದಿಂದ ರಷ್ಯಾ ಹಿಂದೆ ಸರಿದಿದೆ. ಈ ವೇಳೆ ರಷ್ಯಾದ ಹೊರತಾಗಿಯೂ ಯುಕ್ರೇನ್‌ ತನ್ನ ರಫ್ತನ್ನ ಮುಂದುವರೆಸಬಹುದು ಅಂತ ಟರ್ಕಿ ಹೇಳಿದೆ. ʻನಾವು ಮಾನವ ಕುಲದ ಸೇವೆಗಾಗಿ ನಮ್ಮ ನಿರಂತರ ಪ್ರಯತ್ನಗಳನ್ನ ಮಾಡ್ತೇವೆʼ ಅಂತ ಟರ್ಕಿ ಅಧ್ಯಕ್ಷ ತಾಯಿಪ್‌ ಎರ್ಡೋಆನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply