ನ್ಯಾಟೋಯೇತರ ಮಿತ್ರ ರಾಷ್ಟ್ರಗಳ ಪಟ್ಟಿಯಿಂದ ಅಫ್ಘಾನಿಸ್ತಾನ್‌ ಔಟ್‌!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನವನ್ನು ಅಮೆರಿಕ ಕೈ ಬಿಟ್ಟಿದೆ. ಅಫ್ಘಾನ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಒಂದು ವರ್ಷದ ನಂತರ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ನಿರ್ಧಾರ ತಗೊಂಡಿದ್ದಾರೆ. ಅಂದ್ಹಾಗೆ 2012 ರಲ್ಲಿ, ಅಮೆರಿಕ, ಅಫ್ಘಾನಿಸ್ತಾನವನ್ನು NATO ಅಲ್ಲದ ಪ್ರಮುಖ ಮಿತ್ರ ಅಂತ ಗುರ್ತಿಸಿತ್ತು. ಇದು ಅಮೆರಿಕ ಹಾಗೂ ಅಫ್ಘಾನ್‌ ಮಧ್ಯೆ ರಕ್ಷಣಾ ಮತ್ತು ಆರ್ಥಿಕ ಸಂಬಂಧವನ್ನು ಜಾಸ್ತಿ ಮಾಡಿಕೊಳ್ಳೋಕೆ, ಅದನ್ನ ಮತ್ತಷ್ಟು ಉತ್ತಮಗೊಳಿಸಿಕೊಳ್ಳೋಕೆ ಉಭಯ ದೇಶಗಳಿಗೆ ಸಹಾಯ ಮಾಡ್ತಿತ್ತು. ಅಷ್ಟೇ ಅಲ್ಲ ಅಫ್ಘಾನಿಸ್ತಾನಕ್ಕೆ ರಕ್ಷಣೆ ಮತ್ತು ಭದ್ರತೆ-ಸಂಬಂಧಿತ ನೆರವು ನೀಡೊದ್ರ ಜೊತೆಗೆ ಮಿಲಿಟರಿ ಆಯುಧಗಳಲ್ಲಿ ರಿಯಾಯಿತಿಗಳನ್ನು ಕೂಡ ನೀಡಿತ್ತು. ಆದ್ರೆ ಈಗ ಇದನ್ನ ಕೊನೆಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರೋ ಅಮೆರಿಕದ ಸೆಕ್ರಟ್ರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್ 1961ರ ವಿದೇಶಿ ಸಹಾಯ ಕಾಯಿದೆಯ ಸೆಕ್ಷನ್ 517 ಸೇರಿದಂತೆ, ಅಮೆರಿಕ ಸಂವಿಧಾನ ಮತ್ತು ಕಾನೂನುಗಳಿಂದ ನನಗಿರುವ ಅಧಿಕಾರದ ಮೂಲಕ… ಅಫ್ಘಾನಿಸ್ತಾನವನ್ನು NATO ಅಲ್ಲದ ಮಿತ್ರ ರಾಷ್ಟ್ರ ಅನ್ನೊ ಪಟ್ಟಿಯಿಂದ ಹೊರಗಿಡ್ತೇನೆ ಅಂತ ಬೈಡೆನ್‌ ಹೇಳಿದ್ದಾರೆ, ಅಂತ ಬ್ಲಿಂಕನ್ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply