ಸೇನೆ ಸೇರುವವರಿಗೆ ಸುವರ್ಣವಕಾಶ: ಬರುತ್ತಿದೆ ‘ಅಗ್ನೀಪತ್​’ ನೇಮಕಾತಿ ವ್ಯವಸ್ಥೆ

masthmagaa.com:

ಸೇನಾ ನೇಮಕಾತಿಯಲ್ಲಿ ಮಹತ್ವದ ಬೆಳವಣಿಗೆ ಆಗ್ತಾ ಇದ್ದು, ಅಗ್ನಿಪತ್‌ ನೇಮಕಾತಿ ಪ್ರವೇಶ ವ್ಯವಸ್ಥೆಯನ್ನ ಇಂಟ್ರಡ್ಯೂಸ್‌ ಮಾಡಲಾಗುವುದು ಅಂತ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ನೇಮಕಾತಿ ವ್ಯವಸ್ಥೆಯಲ್ಲಿ ಈಗಿರೋ ವಯೋಮಿತಿಗಿಂತ ಕಡಿಮೆ ವಯಸ್ಸಿನ ಯುವಕರನ್ನೇ ಮೂರು ವರ್ಷಗಳ ಕಾಲದವರೆಗೆ ನೇಮಕ ಮಾಡ್ಕೊಳ್ತಾ ಇದ್ದು ಅವ್ರನ್ನ ಅಗ್ನಿವೀರ್ಸ್‌ ಅಂತ ಕರೆಯಲಾಗುತ್ತೆ. ನಂತ್ರ ಬೇಕಾದ್ರೆ ಆರ್ಮಿ ಅವ್ರನ್ನ ಸೇನೆಗೆ ತಗೋಬಹುದು ಅಥ್ವಾ ವಾಪಸ್‌ ಕಳಿಸಬಹುದು. ಆದ್ರೆ ವಾಪಸ್‌ ಆದ ಅಗ್ನವೀರ್ಸ್‌ಗಳಿಗೂ ಕೂಡ ಒಳ್ಳೆಯ ನಾಗರಿಕ ಕೆಲಸಗಳು ಸಿಗುತ್ವೆ. ಯಾಕಂದ್ರೆ ಅವ್ರು ಆರ್ಮಿಲಿ ಟ್ರೈನ್‌ ಆಗಿರ್ತಾರೆ ಅನ್ನೋದು ಅಧಿಕಾರಿಗಳ ವಾದ. ಈ ಪ್ರಸ್ತಾಪ ಕೊನೇ ಹಂತದಲ್ಲಿದ್ದು, ಇನ್ನೇನು ಜಾರಿಗೆ ಬರುತ್ತೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply