ಜುಲೈ 03: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 486 ಅಂಕ ಏರಿಕೆ ಕಂಡು 65,205 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಷೇರು ಮಾರುಕಟ್ಟೆಯಲ್ಲಿ ಸತತ ನಾಲ್ಕನೇ ದಿನವೂ ಏರಿಕೆ ಮುಂದುವರೆದಿದ್ದು ಮುಂಬೈ ಷೇರುಪೇಟೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ಮತ್ತು ವಿದೇಶಿ ಬಂಡವಾಳದ ಒಳಹರಿವಿನ ಪ್ರಭಾವದಿಂದ ಈ ಏರಿಕೆ ಕಂಡುಬಂದಿದೆ. ಇತ್ತ ನಿಫ್ಟಿ 133 ಅಂಕ ಏರಿಕೆ ಕಂಡು 19,322 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 15 ಪೈಸೆ ಏರಿಕೆ ಕಂಡು 81.95 ಆಗಿದೆ. (81 ರೂಪಾಯಿ 95 ಪೈಸೆ).

-masthmagaa.com

Contact Us for Advertisement

Leave a Reply