ಚಂದ್ರನ 3D ಫೋಟೊ ಕಳಿಸಿದ ಪ್ರಗ್ಯಾನ್‌ ರೋವರ್‌!

masthmagaa.com:

ದೇಶದ ಮಹ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ತನ್ನ ಕಾರ್ಯಾಚರಣೆ ನಡೆಸಿದ್ದು, ಸದ್ಯಕ್ಕೆ ಸ್ಲೀಪ್‌ ಮೋಡ್‌ನಲ್ಲಿದೆ. ಅದ್ರೆ ಚಂದ್ರಯಾನ-3ಗೆ ಸಂಬಂಧಿಸಿದಂತೆ ಇಸ್ರೋ ಹಲವು ಮಾಹಿತಿಗಳನ್ನ ಹಂಚಿಕೊಳ್ಳೋದನ್ನ ಮುಂದುವರೆಸಿದೆ. ಇದೀಗ ಪ್ರಗ್ಯಾನ್‌ ರೋವರ್‌ನಲ್ಲಿದ್ದ ಕ್ಯಾಮರಾ ಚಂದ್ರನ 3ಡಿ ಫೋಟೋ ಸೆರೆ ಹಿಡಿದು ಕಳಿಸಿದೆ. ಈ ಫೋಟೊವನ್ನ ‘anaglyph’ ಅಂದ್ರೆ ಒಂದೇ ವಸ್ತುವನ್ನ ಸ್ವಲ್ಪ ಡಿಫರೆಂಟ್‌ ಆಗಿ ಎರಡು ಬಣ್ಣಗಳ 3 ಡೈಮೆನ್‌ಷನ್‌ನಲ್ಲಿ ತೋರಿಸುವ ವಿಧಾನ ಬಳಸಿಕೊಂಡು ತೆಗೆಯಲಾಗಿದೆ ಅಂತ ಇಸ್ರೋ ಹೇಳಿದೆ. ಇತ್ತ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್‌ ಲ್ಯಾಂಡ್‌ ಅಗಿರೋ ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ನ ಫೋಟೊವನ್ನ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಶೇರ್‌ ಮಾಡಿದೆ. ಈ ಬಗ್ಗೆ Xನಲ್ಲಿ ಪೋಸ್ಟ್‌ ಹಾಕಿದ್ದು, ನಾಸಾದ Lunar Reconnaissance Orbiter (LRO) ಚಂದ್ರಯಾನ-3ರ ಲ್ಯಾಂಡರ್‌ ಚಿತ್ರವನ್ನ ಸೆರೆ ಹಿಡಿದಿದೆ ಅಂತ ಬರೆದುಕೊಂಡಿದೆ.

-masthmagaa.com

Contact Us for Advertisement

Leave a Reply